ಆರೋಗ್ಯ

ರಾಜ್ಯಾದ್ಯಂತ ಅನ್ನಭಾಗ್ಯ ಯೋಜನೆಗೆ e-KYC ಕಡ್ಡಾಯ..ಅನರ್ಹರಿಗೆ ಕೊಕ್!

Views: 45

ಕನ್ನಡ ಕರಾವಳಿ ಸುದ್ದಿ:ಅನ್ನಭಾಗ್ಯ ಯೋಜನೆಯಡಿ ಅರ್ಹರು ಅನರ್ಹರನ್ನು ಗುರುತಿಸಲು ರಾಜ್ಯಾದ್ಯಂತ e-KYC ಅಭಿಯಾನ ನಡೆಯುತ್ತಿದೆ. 2.46 ಕೋಟಿ ಪಡಿತರ ಚೀಟಿಗಳ ಪೈಕಿ ಇದುವರೆಗೆ ಸುಮಾರು 40 ಲಕ್ಷ e-KYC ಪೂರ್ಣಗೊಂಡಿದ್ದು, ಸೆಪ್ಟೆಂಬ‌ರ್ ಅಂತ್ಯದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ.

ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ ಕೂಡಾ ಒಂದು. BPL ಮತ್ತು ಅಂತ್ಯೋದಯ (AAY) ಪಡಿತರ ಚೀಟಿದಾರರಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದೀಗ ಅನ್ನಭಾಗ್ಯ ಯೋಜನೆಯ ಮಹತ್ವದ ಸರ್ಜರಿಗೆ ಸರ್ಕಾರ ಮುಂದಾಗಿದೆ.

ರಾಜ್ಯಾದ್ಯಂತ ಪಡಿತರದಾರರಿಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಇದರ ಮೂಲಕ ಅರ್ಹರು ಯಾರು, ಅನರ್ಹರು ಯಾರು ಎಂಬುದನ್ನು ಸ್ಪಷ್ಟಪಡಿಸುವತ್ತ ಇಲಾಖೆ ಗಮನಹರಿಸುತ್ತಿದೆ ಎಂದು ಹೇಳಲಾಗಿದೆ.

ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ, ಕಳ್ಳಾಟಕ್ಕೆ ಬ್ರೇಕ್ ಹಾಕುವುದು ಮತ್ತು ಅನರ್ಹರು ಕೂಡಾ ಅನ್ನಭಾಗ್ಯ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದೆ. ಆದ್ದರಿಂದ ಈ ಎಲ್ಲಾ ಉದ್ದೇಶಗಳಿಂದ ಆಹಾರ ಇಲಾಖೆ ಮಹತ್ವದ ಪ್ರಯೋಗಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.

ಈ ಎಲ್ಲಾ ಬೆಳವಣಿಗೆಗೆಗಳಿಂದಾಗಿ ಆಹಾರ ಇಲಾಖೆ ಸಚಿವರು “ಭಯಪಡಬೇಡಿ, ಸೆಪ್ಟೆಂಬರ್ ಕೊನೆಯವರೆಗೂ ಸಮಯವಿದೆ. ಎಲ್ಲರೂ ಶಾಂತವಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.” ಎಂದು ಹೇಳಿದ್ದಾರೆ.

ಇ-ಕೆವೈಸಿ ಏಕೆ ಕಡ್ಡಾಯ?

ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ಉಚಿತ ಅಥವಾ ರಿಯಾಯಿತಿ ದರದಲ್ಲಿ ಅಕ್ಕಿ, ಗೋಧಿ ಸೇರಿದಂತೆ ಆಹಾರಧಾನ್ಯಗಳನ್ನು ಅರ್ಹ ಜನರಿಗೆ ನೀಡಲಾಗುತ್ತಿದೆ. ಆದರೆ ವರ್ಷಗಳಿಂದ ಹಲವು ಅನರ್ಹ ಕುಟುಂಬಗಳು, ನಕಲಿ ಕಾರ್ಡ್‌ಗಳು, ಮರಣಹೊಂದಿದವರ ಹೆಸರುಗಳೊಂದಿಗೆ ಹೆಚ್ಚುವರಿ ಅಕ್ಕಿಗಳು ಪೂರೈಕೆಯಾಗುತ್ತಿದೆ ಎಂಬ ಆರೋಪಗಳು ಬಂದಿವೆ.

ಈ ಎಲ್ಲಾ ಆರೋಪಗಳಿಂದ ಎಚ್ಚೆತ್ತ ಸರ್ಕಾರ ಇ-ಕೆವೈಸಿ ಸಮೀಕ್ಷೆಯನ್ನು ಆರಂಭಿಸಿದೆ. ಆಧಾರ್ ಆಧಾರಿತ ಈ ಪ್ರಕ್ರಿಯೆಯ ಮೂಲಕ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅನರ್ಹರಿಗೆ ಪ್ರಯೋಜನ ನಿಲ್ಲಿಸುವುದು ಸರ್ಕಾರದ ಗುರಿ. ಆದ್ದರಿಂದ ಆಹಾರ ಇಲಾಖೆಯ ಅಧಿಕಾರಿಗಳ ಪ್ರಕಾರ, ಇ-ಕೆವೈಸಿ ಪೂರ್ಣಗೊಂಡ ನಂತರ ಮಾತ್ರ ಮುಂದಿನ ತಿಂಗಳುಗಳಲ್ಲಿ ಅನ್ನಭಾಗ್ಯ ಯೋಜನೆಯ ವಿತರಣೆ ಮುಂದುವರಿಯುತ್ತದೆ. ಇಲ್ಲದಿದ್ದರೆ ಕಾರ್ಡ್‌ಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದ್ದರಿಂದ ಜನರು ತ್ವರಿತವಾಗಿ ಹತ್ತಿರದ ನ್ಯಾಯಬೆಲೆ ಅಂಗಡಿ ಅಥವಾ ಸೂಚಿಸಿದ ಕೇಂದ್ರಗಳಿಗೆ ಹೋಗಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಲಾಗಿದೆ.

Related Articles

Back to top button
error: Content is protected !!