ಜನಮನ
ಸಾಮೂಹಿಕ ಅತ್ಯಾಚಾರವೆಸಗಿ ನರ್ಸ್ ಕೊಲೆ

Views: 0
ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ, ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದ ಅಮಾನವೀಯ ಘಟನೆ ಬಿಹಾರದಲ್ಲಿ ನಡೆದಿದೆ.
ಜಿಲ್ಲೆಯ ಮೋತಿಹಾರಿಯಲ್ಲಿರುವ ಜಾನಕಿ ಸೇವಾ ಸದನ ನರ್ಸಿಂಗ್ ಹೋಮ್ ನಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ದಿಗ್ಭ್ರಮೆ ಆಕ್ರೋಶಕ್ಕೆ ಕಾರಣವಾಗಿದೆ.
ಅತ್ಯಾಚಾರ ಕೊಲೆಗೀಡಾದ ನರ್ಸ್ ಪತಿ ತೀರಿಕೊಂಡಿದ್ದಾರೆ. ಹೀಗಾಗಿ ತಮ್ಮ ತಾಯಿ ಹಾಗೂ ನಾಲ್ಕು ವರ್ಷದ ಮಗನೊಂದಿಗೆ ವಾಸವಾಗಿದ್ದರು.ಅವರು ಆಸ್ಪತ್ರೆಗೆ ಸೇರಿಕೊಳ್ಳುತ್ತಲೇ ಅವರ ಜೊತೆ ಅಸಭ್ಯ ವರ್ತನೆಗಳು ಪ್ರಾರಂಭವಾಗಿದ್ದರಿಂದ ಅವರು ಕೆಲಸ ಬಿಟ್ಟಿದ್ದರು.
ಆದರೆ ಇನ್ನು ಮುಂದೆ ಹಾಗಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿತ್ತು.
ಆದರೆ ಅಗಸ್ಟ್ 8ರಂದು ನರ್ಸ್ ಕರ್ತವ್ಯ ಮೇಲೆ ಹೋಗಿದ್ದ ಅವರು ನಾಪತ್ತೆಯಾಗಿದ್ದರು. ತೀವ್ರ ಹುಡುಕಾಟ ನಡೆಸಿದರು ಅವರು ಪತ್ತೆಯಾಗಿಲ್ಲ ನಂತರ ಅವರು ಶವವಾಗಿ ಪತ್ತೆಯಾಗಿದ್ದಾರೆ.
- ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಖೆ ನೆಡೆಸುತ್ತಿದ್ದಾರೆ.






