ಜನಮನ

ಸಿದ್ದಗಂಗಾ ಮಠದ ಹಿಂಭಾಗದ ಗೋ ಕಟ್ಟೆಗೆ ಬಿದ್ದು ನಾಲ್ವರು ಸಾವು

Views: 0

ತುಮಕೂರು ಸಿದ್ದಗಂಗಾ ಮಠದ ಹಿಂಭಾಗದಲ್ಲಿನ ಗೋಕಟ್ಟೆಯಲ್ಲಿ ಬಿದ್ದು ನಾಲ್ವರು ಮೃತಪಟ್ಟಿದ್ದಾರೆ.

ಲಕ್ಷ್ಮಿ( 33) ಮಹದೇವಪ್ಪ (44) ಶಂಕರ( 11 )ಹರ್ಷಿತ್( 11) ಮೃತಪಟ್ಟವರು ಎಂದು ತಿಳಿಯಲಾಗಿದೆ.

ರಂಜಿತ್, ಶಂಕರ್, ಹರ್ಷಿತ್, ಮಠದಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದರು. ರಂಜಿತ್ ನ ತಾಯಿ ಲಕ್ಷ್ಮಿ ಮಗನನ್ನು ಭೇಟಿಯಾಗಲು ಮಠಕ್ಕೆ ಬಂದಿದ್ದರು.

ಈ ವೇಳೆ ಊಟಕ್ಕೆ ಬಂದಾಗ ಹಿಂಬದಿಯಲ್ಲಿನ ಗೋಕಟ್ಟೆಗೆ ತೆರಳಿದರು.

ರಂಜಿತ್ ಗೋಕಟ್ಟೆಗೆ ಈಜಲು ತೆರಳಿದ್ದಾರೆ. ಈಜಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ನೋಡಿದ ತಾಯಿ ನೀರಿಗೆ ಹಾರಿ ಮಗನನ್ನು ರಕ್ಷಿಸಲು ಹೋಗಿ ಆಕೆ ಸಾವನಪ್ಪಿದ್ದಾಳೆ.

ಇದೇ ವೇಳೆ ಇಬ್ಬರನ್ನು ಕಾಪಾಡಲು ಅಲ್ಲಿ ಇದ್ದ ಶಂಕರ್, ಹರ್ಷಿತ್ ಗೋಕಟ್ಟೆಗೆ ಇಳಿದಿದ್ದಾರೆ.

ಘಟನೆಯಲ್ಲಿ ಅವರೂ ಸಹ ಮೃತಪಟ್ಟರು. ಮಹದೇವ ಎಂಬುವರು ನೀರಿಗೆ ಬಿದ್ದವರನ್ನು ರಕ್ಷಿಸಲು ಧಾವಿಸಿದ್ದು ಈಜು ಬಾರದೆ ಮುಳುಗಿ ಸಾವನ್ನಪ್ಪಿದ್ದಾರೆ.

ಈ ಘಟನೆಯಲ್ಲಿ ರಂಜಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಕರಣ ಕ್ಯಾಸ್ಸಂದ್ರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

.

Related Articles

Back to top button
error: Content is protected !!