ಜನಮನ
ನಕಲಿ ನಾಗಸಾಧುಗಳು ಮಂಕು ಬೂದಿ ಎರಚಿ ಚಿನ್ನದ ಉಂಗುರ ಕದ್ದು ಪರಾರಿ

Views: 2
ಕೈಯಲ್ಲಿ ಕಮಂಡಲ, ಮೈಮೇಲೆ ಕಾವಿ, ಹಣೆಯಲ್ಲಿ ವಿಭೂತಿ ಹಚ್ಚಿಕೊಂಡು ಬಂದಿದ್ದ ನಾಗಸಾಧುಗಳು ಭಕ್ತರೊಬ್ಬರಿಗೆ ಮಂಕುಬೂದಿ ಎರಚಿ ಚಿನ್ನದ ಉಂಗುರ ಕದ್ದು ಪರಾರಿಯಾಗಿದ್ದಾರೆ.
ಭಕ್ತರೊಬ್ಬರಿಗೆ ಧ್ಯಾನ ಮಾಡುವಂತೆ ಹೇಳಿ ಆತನ ಕೈಯಲ್ಲಿದ್ದ ಚಿನ್ನದುಂಗುರ ದೋಚಿಕೊಂಡು ಹೋಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ನಗರದ ಎಂಜಿ ರಸ್ತೆಯಲ್ಲಿರುವ ಮಲ್ನಾಡ್ ಸ್ಟುಡಿಯೋ ಮಾಲೀಕ ಚಂದ್ರುವಿನ ಕೈಯಲ್ಲಿ ರುದ್ರಾಕ್ಷಿ ಇಟ್ಟು ಎರಡು ಕೈಯನ್ನು ಬಲವಾಗಿ ಹಿಡಿದು ಮಂತ್ರ ಹೇಳಿಸಿದ್ದಾರೆ.
ಭಕ್ತನು ಧ್ಯಾನದಿಂದ ಹೊರ ಬಂದಾಗ ಬಲಗೈಯಲ್ಲಿದ್ದ ಉಂಗುರ ದೋಚಿಕೊಂಡು ಹೋಗಿರುವುದು ಚಂದ್ರು ಗಮನಕ್ಕೆ ಬಂದಿದೆ.
ಕೂಡಲೇ ತುಮಕೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಟ್ಟು ಮೂವರು ನಾಗಸಾಧು ವೇಷದಲ್ಲಿ ತಿರುಗಾಡುತ್ತಿದ್ದವರು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪೊಲೀಸರು ಆರೋಪಿಗಳನ್ನು ಹಿಡಿಯಲು ಕಾರ್ಯಪ್ರವೃತ್ತರಾಗಿದ್ದಾರೆ.






