ಅಗಸ್ಟ್ 12, 18 ಬೀಡಿ ಕಾರ್ಮಿಕರ ಧರಣಿ

Views: 0
ಕುಂದಾಪುರ:ಬೀಡಿ ಕಾರ್ಮಿಕರ ನ್ಯಾಯಬದ್ಧ ಹಕ್ಕಾಗಿರುವ ತುಟ್ಟಿಭತ್ಯೆ ಹಾಗೂ ಕನಿಷ್ಠ ಕೂಲಿಯನ್ನು ಕಳೆದ ಮೂರು ವರ್ಷಗಳಿಂದ ನೀಡದಿರುವುದನ್ನು ಖಂಡಿಸಿ ಅಗಸ್ಟ್ 12ರಂದು ಉಡುಪಿ ಅಂಬಲಪಾಡಿಯಲ್ಲಿರುವ ಭಾರತ್ ಬೀಡಿ ಕಂಪನಿ ಎದುರು ಹಾಗೂ ಅಗಸ್ಟ್ 18ರಂದು ಸಂತೆಕಟ್ಟೆಯಲ್ಲಿರುವ ಸೌತ್ ಕೆನರಾ ಹೋಂ ಇಂಡಸ್ಟ್ರೀಸ್ ಎದುರು ಬೆಳಿಗ್ಗೆ ಧರಣಿ ನಡೆಸಲು ಉಡುಪಿ ಜಿಲ್ಲಾ ಬೀಡಿ ಫೆಡರೇಷನ್(ಸಿಐಟಿಯು) ನಿರ್ಧರಿಸಿದೆ.
ಬೀಡಿ ಮಾಲಕರು ಬೀಡಿ ಕಾರ್ಮಿಕರಿಗೆ ಕೊಡಬೇಕಾಗಿದ್ದ ತುಟ್ಟಿ ಭತ್ಯೆ ವಿನಾಯಿತಿ ಕೋರಿ ಅಂದಿನ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ ಪರಿಣಾಮ ಸರಕಾರ ಕಾರ್ಮಿಕ ವಿರೋಧಿಯಾಗಿ ಆದೇಶ ಮಾಡಿತು. ಇದರ ವಿರುದ್ಧ ಬೀಡಿ ಕಾರ್ಮಿಕರ ಸಂಘಟನೆಗಳು ಸಿಐಟಿಯು ನೇತೃತ್ವದಲ್ಲಿ ತೀವ್ರ ಹೋರಾಟ ನಡೆಸಿ ಸರಕಾರದ ಆದೇಶ ವಾಪಸ್ ಪಡೆಯಿತು. ಇದರ ವಿರುದ್ಧ ಮಾಲಕರು ನ್ಯಾಯಾಲಯದಿಂದ ತಡೆಯಾಜ್ನೆ ತಂದರು.
ತಡೆಯಾಜ್ನೆ ವಿರುದ್ಧ ಕಾರ್ಮಿಕ ಸಂಘಟನೆಗಳು ಕಾನೂನು ಹೋರಾಟ ನಡೆಸಿ ಕಾರ್ಮಿಕರ ಪರವಾದ ಆದೇಶ ಎತ್ತಿ ಹಿಡಿದು ಪ್ರತಿ ಸಾವಿರ ಬೀಡಿಗೆ 12.75 ರಂತೆ ನೀಡಲು ಶಿಫಾರಸು ಮಾಡಿದರು.ಆದರೆ ಬೀಡಿ ಕಂಪೆನಿಯ ಮಾಲಿಕರು ಇದರ ವಿರುದ್ಧವೂ ತಡೆಯಾಜ್ಞೆ ತಂದಿದ್ದರು.
ಆದರೆ ಈ ಹಣ ನೀಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಹಾಗೂ ಕಾರ್ಮಿಕರ ಕನಿಷ್ಠ ಕೂಲಿ ಇದರ ವಿರುದ್ಧ ಸಿಐಟಿಯುಗೆ ಸೇರಿದ ಬೀಡಿ ಕಾರ್ಮಿಕರು ನಡೆಸುವ ಬೃಹತ್ ಪ್ರತಿಭಟನಾ ಧರಣೆಗೆ ಕುಂದಾಪುರ ಹಾಗೂ ಬೈಂದೂರು ಸಹಸ್ರಾರು ಕಾರ್ಮಿಕರು ಭಾಗವಹಿಸಬೇಕು ಎಂದು ಪೆಡರೇಶನ್ ಅಧ್ಯಕ್ಷ ಮಹಾಬಲ ವಡೇರ ಹೋಬಳಿ ಹಾಗೂ ಕುಂದಾಪುರ ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷ ಬಲ್ಕೀಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






