ಸಾಮಾಜಿಕ

ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ರಾಷ್ಟ್ರೀಯ ಕೈಮಗ್ಗ ದಿನಾಚರಣೆ

Views: 130

ಕನ್ನಡ ಕರಾವಳಿ ಸುದ್ದಿ: ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ಸಾಲಿಕೇರಿಯ ಆಶ್ರಯದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯು ಅಗಸ್ಟ್ 7ರಂದು ದೇವಸ್ಥಾನದ ಸಭಾಭವನದಲ್ಲಿ ಜರುಗಿತು.

ಮಹಾಸಭಾದ ಅಧ್ಯಕ್ಷರಾದ ರವಿ ಶೆಟ್ಟಿಗಾರ್ ಕಾರ್ಕಳ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ- ಕಾಲಧರ್ಮಕ್ಕನುಸಾರವಾಗಿ ಕೈಮಗ್ಗ ನೇಕಾರಿಕೆ ನಶಿಸುತ್ತಿದ್ದರೂ ಈ ವೃತ್ತಿಯನ್ನು ಮುಂದುವರಿಸುತ್ತಿರುವ ಬಂಧುಗಳ ಹಿತಾಸಕ್ತಿಯನ್ನು ಕಾಪಾಡಲು ಅಗತ್ಯ ಕ್ರಮವನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಅಲ್ಲದೆ ಶೆಟ್ಟಿಗಾರ ಜಾತಿವಾಚಕಪದವು ಸರಕಾರದ ಹಿಂದುಳಿದ ವರ್ಗಗಳ 2 ಎ ಪಟ್ಟಿಯಲ್ಲಿ ಸೇರದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಈ ಬಗ್ಗೆ ಪ್ರಯತ್ನ ಮುಂದುವರಿಸುವುದಾಗಿ ಆಶ್ವಾಸನೆ ನೀಡಿದರು. ಮುಂದಿನ ವರ್ಷದಲ್ಲಿ ರಾಜ್ಯಮಟ್ಟದ ನೇಕಾರ ಸಮ್ಮೇಳನವನ್ನು ನಡೆಸುವ ತಮ್ಮ ಇಂಗಿತವನ್ನು ಕೂಡ ವ್ಯಕ್ತಪಡಿಸಿದರು.ನೇಕಾರ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಪ್ರೇಮಾನಂದ ಶೆಟ್ಟಿಗಾರರು ಪ್ರಸ್ತಾವನೆಯ ಮಾತುಗಳನ್ನಾಡುತ್ತ ಉಡುಪಿಯಲ್ಲಿ ನಡೆಯುವ ನೇಕಾರ ತರಬೇತಿಯ ವಿಚಾರದಲ್ಲಿ ದೇಶದಾದ್ಯಂತ ವ್ಯಾಪಕ ಪ್ರಚಾರವಿರುವುದಾಗಿಯೂ ಕೈಗಾರಿಕೆಯ ಅಭಿಮಾನಿಗಳು ಪ್ರಶಂಶಿಸುತ್ತಿರುವುದಾಗಿಯೂ ನುಡಿದರು. ರಾಜಮಾತೆ ವಿಜಯ ರಾಜ ಸಿಂಧಿಯಾರವರು ಉಡುಪಿ ಭೇಟಿಯ ಸಂದರ್ಭದಲ್ಲಿ ಇಲ್ಲಿಯ ಕೈಮಗ್ಗ ಉತ್ಪನ್ನಗಳನ್ನು ಮೆಚ್ಚಿ ಖರೀದಿ ಮಾಡಿದ್ದಾರೆಂದು ತಿಳಿಸಿದರು.

ಸಾಲಿಕೇರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ದೇವಸ್ಥಾನದ ಸುರೇಶ ಶೆಟ್ಟಿಗಾರರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತತಾಾ, ನೇಕಾರ ಸಹಕಾರಿ ಸಂಘಗಳು ನೇಕಾರರ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗಿರುವುದರಿಂದಬ್ಯಾಂಕಿಂಗ್ ವ್ಯವಹಾರವನ್ನು ನೇಕಾರಿಕೆಯೊಂದಿಗೆ ಸಂಯೋಜಿಸಿ ಸಂಸ್ಥೆಯನ್ನು ಮುಂದುವರಿಸಬೇಕಾದ ಸ್ಥಿತಿ ಒದಗಿರುವುದನ್ನು ವಿವರಿಸಿದರು.

ಈ ಶುಭಾವಸರದಲ್ಲಿ ಎಂಟು ಜನ ಹಿರಿಯ ನೇಕಾರರನ್ನು ಸನ್ಮಾನಿಸಲಾಯಿತು.

ಶ್ರೀ ರಾಘವ ಶೆಟ್ಟಿಗಾರ ಸಾಲಿಕೇರಿ, ಶ್ರೀಮತಿ ಶೋಭಾ ಹರಿಪ್ರಸಾದ್, ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಲಕ್ಷ್ಮಣ್ ಕೊಡಿಯಾಲ್ ಬೈಲ್, ರಾಮದಾಸ ಪಣಿಯಾಡಿ, ಪೀತಾಂಬರ ಶೆಟ್ಟಿಗಾರ್ ಸಮಯೋಚಿತ ಸಲಹೆಗಳನ್ನು ನೀಡಿದರು.

ಶ್ರೀಮತಿ ಶೈಲಜಾ ಸುಧಾಕರ್ ಪ್ರಾರ್ಥಿಸಿದರು. ವೆಂಕಟರಾಯ ಶೆಟ್ಟಿಗಾರ್ ಸ್ವಾಗತಿಸಿದರು ಶ್ರೀಯುತ ಸುಧಾಕರ ಶೆಟ್ಟಿಗಾರ್ ಸಾಲಿಕೇರಿ ಧನ್ಯವಾದ ಸಮರ್ಪಿಸಿದರು. ಶ್ರೀಯುತ ರಾಜೇಂದ್ರ ಶೆಟ್ಟಿಗಾರ್ ಬಸ್ರೂರು ಕಾರ್ಯಕ್ರಮದ ನಿರೂಪಣೆಗೈದರು

Related Articles

Back to top button
error: Content is protected !!