ಜನಮನ

ಹಾಸನದಲ್ಲಿ ಎಚ್ ಡಿ ರೇವಣ್ಣ ಆಪ್ತ ಗ್ರಾನೈಟ್ ಉದ್ಯಮಿಯ ಭೀಕರ ಹತ್ಯೆ

Views: 0

ಜೆಡಿಎಸ್ ಮುಖಂಡ ಎಚ್‍ಡಿ ರೇವಣ್ಣ ಆಪ್ತ ಗ್ರಾನೈಟ್ ಉದ್ಯಮಿ ಕೃಷ್ಣೇಗೌಡ ಅವರನ್ನು ಹಾಡಹಗಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಗ್ರಾನೈಟ್ ವ್ಯಾಪಾರಿ, ಗುತ್ತಿಗೆದಾರ ಅವರ ಮಾಲೀಕತ್ವದ ಮುಂಭಾಗದಲ್ಲಿ ಮಧ್ಯಾಹ್ನ ಈ ಘಟನೆ ಸಂಭವಿಸಿದೆ.

ಇನ್ನೋವಾ ಕಾರನ್ನು ನಿಲ್ಲಿಸಿ ಗ್ರಾನೈಟ್ ಘಟಕಕ್ಕೆ ಹೋಗುತ್ತಿದ್ದಾಗ ಐವರ ತಂಡ ಹಿಂದಿನಿಂದ ಬಂದು ಹಲ್ಲೆ ನಡೆಸಿದ್ದಾರೆ. ನೆಲಕ್ಕೆ ಬಿದ್ದ ನಂತರ ನಿರಂತರವಾಗಿ ಮಾರಕಾಸ್ತ್ರಗಳಿಂದ ಹಲವು ಭಾರಿ ದಾಳಿ ಮಾಡಿ ಪರಾರಿಯಾಗಿದ್ದಾರೆ.

ಹತ್ಯೆಗೀಡಾದ ಕೃಷ್ಣೆಗೌಡ ಹಾಸನ ನಗರದಲ್ಲಿ ಹಣಕಾಸಿನ ವಿಚಾರದಲ್ಲಿ ಮನಸ್ಸ್ತಾಪ ಹೊಂದಿದ್ದಾರೆ ಎನ್ನಲಾಗಿದೆ. ಸಂಚಾರ ಠಾಣೆಯಲ್ಲಿ ಈ ಹಿಂದೆ ಇದೇ ವಿಚಾರವಾಗಿ ದೂರು ಪ್ರತಿ ದೂರುಗಳು ದಾಖಲಾಗಿವೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ, ನಂತರ ಚೆಕ್ ಪೋಸ್ಟ್ ಗಳಲ್ಲಿ ಆರೋಪಿಗಾಗಿ ತಪಾಸಣೆ ತೀವ್ರಗೊಳಿಸಿದ್ದಾರೆ.

Related Articles

Back to top button
error: Content is protected !!