ಧಾರ್ಮಿಕ

ಶ್ರೀ ಕ್ಷೇತ್ರ ಆನೆಗುಡ್ಡೆಗೆ ಎಡನೀರು ಮಠದ ಪೀಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರ ಬೇಟಿ

Views: 45

ಕನ್ನಡ ಕರಾವಳಿ ಸುದ್ದಿ: ಚಾತುರ್ಮಾಸ್ಯದ ಪೂರ್ವಭಾವಿ ಸಂಚಾರದ ಅಂಗವಾಗಿ ಎಡನೀರು ಮಠದ ಪೀಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಜುಲೈ 24 ಶುಕ್ರವಾರ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಆಗಮಿಸಿ ಶ್ರೀ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದರು.

ದೇವಸ್ಥಾನದ ಆಡಳಿತ ಮಂಡಳಿಯವರು ಶ್ರೀಪಾದಂಗಳವರನ್ನು ಪೂರ್ಣಕುಂಭ ಹಾಗೂ ವಾದ್ಯಗೋಷ್ಠಿಯೊಂದಿಗೆ ಭವ್ಯವಾಗಿ ಸ್ವಾಗತಿಸಿ ಫಲ ಕಾಣಿಕೆಯನ್ನು ಸಮರ್ಪಿಸಿದರು.

ಪರ್ಯಾಯ ಅರ್ಚಕರಾದ ಕೆ. ಸೂರ್ಯನಾರಾಯಣ ಉಪಾಧ್ಯಾಯರು ಶ್ರೀಪಾದಂಗಳವರಿಗೆ ದೇವರ ವಿಶೇಷ ಪ್ರಸಾದವನ್ನು ಅರ್ಪಿಸಿ, ಮುಂಬರುವ ಚಾತುರ್ಮಾಸ್ಯ ವ್ರತವು ಯಶಸ್ವಿಯಾಗಿ ನೆರವೇರಲೆಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಅರ್ಚಕ ವೃಂದ, ಪರ್ಯಾಯ ಅರ್ಚಕರು, ದೇವಸ್ಥಾನದ ಸಿಬ್ಬಂದಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದು, ಶ್ರೀಪಾದಂಗಳವರಿಂದ ಫಲಮಂತ್ರಾಕ್ಷತೆಯನ್ನು ಪಡೆದು ಆಶೀರ್ವಾದ ಪಡೆದರು.

Related Articles

Back to top button
error: Content is protected !!