ಜನಮನ
ಮಗಳ ಅಂತ್ಯಸಂಸ್ಕಾರ ವೇಳೆಯಲ್ಲಿ ಚಿತೆಗೆ ಹಾರಿದ ತಂದೆ

Views: 0
ರಾಜಸ್ಥಾನದ ಬಿಲ್ವಾಲದಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ವ್ಯಸಗಿ ಆಕೆಯನ್ನು ಪೊದೆಗೆ ಎಸೆದ ಅಪಘಾತಕಾರಿ ಘಟನೆಯಿಂದ ಗಲಾಟೆ ನಡೆಯುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಕುಟುಂಬದವರು ಮತ್ತು ಗ್ರಾಮಸ್ಥರು ಕೆಲವು ದಿನಗಳಿಂದ ಧರಣಿ ನಡೆಸುತ್ತಿದ್ದರು.
ಅಂತಿಮವಾಗಿ ಸರಕಾರ ನ್ಯಾಯ ಒದಗಿಸುವ ಭರವಸೆ ನೀಡಿದ ಬಳಿಕ ಕುಟುಂಬದವರು ಘಟನೆ ನಡೆದ ಆರು ದಿನಗಳ ಬಳಿಕ ಬಾಲಕಿಯ ಅರ್ಧಸುಟ್ಟ ಶವವನ್ನು ಅಂತಿಮ ಸಂಸ್ಕಾರವನ್ನು ನೆರವೇರಿಸಲು ಮನೆಯಲ್ಲಿ ತಯಾರು ಮಾಡಿಕೊಂಡಿದ್ದರು. ಅಂತಿಮ ಸಂಸ್ಕಾರ ನಡೆಯುತ್ತಿರುವಾಗಲೇ ಹೊತ್ತಿ ಉರಿಯುತ್ತಿರುವ ಬೆಂಕಿಗೆ ಆಕೆಯ ತಂದೆ ಚಿತೆಗೆ ಹಾರಿದ್ದಾರೆ. ಸೇರಿದವರು ಅವರನ್ನು ಬೆಂಕಿಯಿಂದ ಮೇಲಕ್ಕೆ ಎತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ವೇಳೆ ಗಾಯಗೊಂಡಿದ್ದ ಬಾಲಕಿಯ ತಂದೆಯನ್ನು ಕೂಡಲೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ.






