ಬಿ.ಟೆಕ್‌ನಲ್ಲಿ ಚಿನ್ನದ ಪದಕ ಪಡೆದು, 50ಕ್ಕೂ ಹೆಚ್ಚು ಬಾರಿ ಯತ್ನಿಸಿದರೂ ಉದ್ಯೋಗ ದೊರೆಯದೆ ಯುವಕ ಆತ್ಮಹತ್ಯೆ
Views: 78
ಕನ್ನಡ ಕರಾವಳಿ ಸುದ್ದಿ: ಬಿ.ಟೆಕ್‌ನಲ್ಲಿ ಚಿನ್ನದ ಪದಕ ಪಡೆದಿದ್ದ 23ರ ಯುವಕನೊಬ್ಬ 50ಕ್ಕೂ ಹೆಚ್ಚು ಬಾರಿ ಯತ್ನಿಸಿದರೂ ಸರಕಾರಿ ಉದ್ಯೋಗ ದೊರೆಯದ ಕಾರಣ ಆತ್ಮ ಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಸುರದಲ್ಲಿ ಶುಕ್ರವಾರ ನಡೆ ದಿದೆ. ಮೃತನನ್ನು ಆನಂದ್ ಕುಮಾರ್ ಎಂದು ಗುರುತಿಸಲಾಗಿದ್ದು, ‘ಸಾರಿ ಪಪ್ಪಾ’ ಸರಕಾರಿ ಕೆಲಸಕ್ಕಾಗಿ 50 ಬಾರಿ ಯತ್ನಿಸಿದೆ. ಆದರೆ ಯಶಸ್ವಿಯಾಗಲಿಲ್ಲ. ನನ್ನನ್ನು ದಯವಿಟ್ಟು ಕ್ಷಮಿಸಿ’ ಎಂದು ಆತ ಬರೆದ ಸೂಸೈಡ್ ನೋಟ್ ಸಹ ಪತ್ತೆಯಾಗಿದೆ.
ಆನಂದ್ ತನ್ನ ಮನೆಯಲ್ಲಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಕೆಲಸದಾಕೆ ಮನೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಆನಂದ್ ಸೋದರನ ಮದುವೆ ಮಾತುಕತೆಗಾಗಿ ಅವರ ತಂದೆ ಬಿಹಾರಕ್ಕೆ ತೆರಳಿದ್ದ ವೇಳೆ ದುರಂತ ನಡೆದಿದೆ.
2024ರಲ್ಲಿ ಬಿಟೆಕ್ ಮುಗಿಸಿದ್ದ ಆನಂದ್ ಉತ್ತರ ಪ್ರದೇಶಕ್ಕೆ 3ನೇ ರ‍್ಯಾಂಕ್ ಪಡೆದಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದ ಆನಂದ್ ಹಲವು ಖಾಸಗಿ ಕಂಪೆನಿಗಳಲ್ಲೂ ಉದ್ಯೋಗ ಪಡೆಯಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಹಲವು ಪರೀಕ್ಷೆಗಳ ಬಳಿಕವೂ ಕೆಲಸ ದೊರೆಯದೇ ಆನಂದ್ ಒತ್ತಡಕ್ಕೊಳಗಾಗಿದ್ದರು ಎನ್ನಲಾಗಿದೆ.






