ಇತರೆ
ಕುಂದಾಪುರ: ವಂಡ್ಸೆ- ನೆಂಪು ಅಂಗನವಾಡಿ ಸಹಾಯಕಿ ನೇಣಿಗೆ ಶರಣು
Views: 659
ಕನ್ನಡ ಕರಾವಳಿ ಸುದ್ದಿ: ನೆಂಪು ಅಂಗನವಾಡಿ ಕೇಂದ್ರದ ಸಹಾಯಕಿ ಅಶ್ವಿನಿ ದೇವಾಡಿಗ (28) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಜೆ ಸಂಭವಿಸಿದೆ.
ಇವರು ಕಳೆದೆರಡು ವರ್ಷಗಳಿಂದ ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಿರಿಮಂಜೇಶ್ವರದಲ್ಲಿ ಅವರ ಮನೆಯಿದ್ದು, ಅಲ್ಲಿಂದ ನಿತ್ಯ ಓಡಾಟ ನಡೆಸುತ್ತಿದ್ದರು.
ಆತ್ಮಹತ್ಯೆಗೆ ಕಾರಣ ಏನು ಅನ್ನುವುದು ತಿಳಿದು ಬಂದಿಲ್ಲ.
ಸ್ಥಳಕ್ಕೆ ಕುಂದಾಪುರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ್, ಸೂಪರ್‌ವೈಸರ್ ಭಾಗ್ಯವತಿ, ಕುಂದಾಪುರ ಗ್ರಾಮಾಂತರ ಠಾಣಾ ಎಸ್ .ಐ. ಚಂದ್ರಕಲಾ, ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






