ಇತರೆ

ಯೂಟ್ಯೂಬ್ ನೋಡಿ ತಾನೇ ಹೆರಿಗೆ ಮಾಡಿಕೊಂಡ ಮಹಿಳೆ ಸಾವು

Views: 91

ಕನ್ನಡ ಕರಾವಳಿ ಸುದ್ದಿ:ಗರ್ಭಿಣಿಯೋರ್ವಳು ಎರಡನೇ ಹೆರಿಗೆ ಸಂದರ್ಭ ಎಡವಟ್ಟು ಮಾಡಿಕೊಂಡು ಪ್ರಾಣ ಕಳೆದುಕೊಂಡಿರುವ ಘಟನೆ ತಿರುಪ್ಪುರ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.

ಸಾಮಾಜಿಕ ಜಾಲತಾಣ ಯೂಟ್ಯೂಬ್ನಲ್ಲಿನ ವಿಡಿಯೋ ವೀಕ್ಷಿಸಿ ಎರಡನೇ ಹೆರಿಗೆಯನ್ನು ಮನೆಯಲ್ಲೇ ಮಾಡಿಸಿಕೊಂಡ ಪರಿಣಾಮ 32 ವರ್ಷದ ಮಹಿಳೆ ಸಾವನ್ನಪ್ಪಿದ್ದಾಳೆ.

ಮೊದಲ ಹೆರಿಗೆಯಲ್ಲಿ ಸಿ ಸೆಕ್ಷನ್ ಡೆಲಿವರಿ ಆಗಿತ್ತು. ಅದರಿಂದ ಆಕೆ ಹೆದರಿದ್ದಳು. ಈ ಬಾರಿ ಭಯಬಿದ್ದು ಆಸ್ಪತ್ರೆಗೆ ಹೋಗಲು ನಿರಾಕರಿಸಿದಳು ಎಂದು ಮೃತಳ ಕುಟುಂಬಸ್ಥರು ಹೇಳಿದ್ದಾರೆ.

ಜೂನ್ 24 ರಂದು ಪುಂಜೈ ಥಲವೈಪಳಯಂ ಗ್ರಾಮದ ಮನೆಯಲ್ಲೇ ಎರಡನೇ ಬಾರಿಗೆ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಹೆರಿಗೆ ಬಳಿಕ ಹೆಚ್ಚಿನ ರಕ್ತಸ್ರಾವವಾಗಿತ್ತು. ಇದರಿಂದ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಕೂಡಲೇ ಪೆರುಂದುರೈ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಆಕೆಯನ್ನು ಕರೆದೊಯ್ಯಲಾಗಿತ್ತು. ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೊಯಿಮತ್ತೂರಿನಲ್ಲಿರುವ ರಾಯಲ್ ಕೇರ್ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಆಕೆಯನ್ನು ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಆದ್ರೆ ಭಾನುವಾರ (ಜೂ. 28) ರಂದು ಚಿಕಿತ್ಸೆ ಫಲಕಾರಿಯಾಗದೇ 32 ವರ್ಷದ ಶಶಿಕಲಾ ಮೃತಪಟ್ಟಿದ್ದಾಳೆ.

ದೂರು ದಾಖಲಿಸಿಕೊಂಡ ಪೊಲೀಸರು, ಈ ಕುರಿತಂತೆ ತೀವ್ರ ತನಿಖೆ ಆರಂಭಿಸಿದ್ದರು. ಆದ್ರೆ ಭಾನುವಾರ ಬೆಳಗ್ಗೆ 10 ಗಂಟೆಗೆ ಬಾಣಂತಿ ಶಶಿಕಲಾ ಕೊನೆಯುಸಿರೆಳೆದಳು.

ಹೆರಿಗೆ ಪ್ರಕರಣವನ್ನು ಸಾವು ಪ್ರಕರಣವಾಗಿ ಬದಲಿಸಿದ ಪೊಲೀಸರು, ಈ ಕುರಿತಂತೆ ಪ್ರತಿಯೊಬ್ಬರನ್ನು ವಿಚಾರಣೆ ನಡೆಸಿದರು. ಮನೆಯಲ್ಲಿ ಮಹಿಳೆಗೆ ಹೆರಿಗೆ ಮಾಡಿಸಲು ಸಹಕರಿಸಿದ ಎಲ್ಲರನ್ನೂ ಪೊಲೀಸರು ತನಿಖೆಗೊಳಪಡಿಸಿದ್ದಾರೆ.

Related Articles

Back to top button
error: Content is protected !!