ಯುವಜನ

ಸುರತ್ಕಲ್: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಬಳಿಕ ಆತ್ಮಹತ್ಯೆ ಹಿಂದೆ ಡ್ರಗ್ಸ್ ಕಾರಣ!

Views: 70

ಕನ್ನಡ ಕರಾವಳಿ ಸುದ್ದಿ: ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಟಿಪಳ್ಳದಲ್ಲಿ ಜೂನ್ 23 ರಂದು ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಬಳಿಕ ಆಕೆ ಗರ್ಭಿಣಿಯಾಗಿ ಕೊನೆಗೆ ಆತ್ಮಹತ್ಯೆ ಮಾಡಿ ಕೊಂಡಿರುವ ಪ್ರಕರಣದಲ್ಲಿ ಡ್ರಗ್ಸ್ ಕೂಡಾ ಕೆಲಸ ಮಾಡಿದೆ ಎಂದು ಮಂಗಳೂರು ಪೊಲೀಸ್ ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ ಅವರು ತಿಳಿಸಿದ್ದಾರೆ.

ಮಂಗಳೂರು ಪುರಭವನದಲ್ಲಿ  ಮಂಗಳೂರು ನಗರ ಪೊಲೀಸ್‌ ವತಿಯಿಂದ ಯೆನೆಪೊಯ ಡೀಮ್ಸ್ ಯೂನಿವರ್ಸಿಟಿ ಸಹಯೋಗದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದ್ದಾರೆ.

ಮೃತ ಬಾಲಕಿ ಮ್ಯೂಸಿಕ್ ಕಾರ್ಯಕ್ರಮ ನೀಡುವ ತಂಡದಲ್ಲಿದ್ದು, ಅಲ್ಲಿ ಆಕೆಗೆ ಡ್ರಗ್ಸ್ ಸೇವನೆಯ ಪಿಡುಗು ಹೊಂದಿದವರ ಸಹವಾಸ ಲಭಿಸಿದೆ.

ಈ ಸಂದರ್ಭದಲ್ಲಿ ತಂಡದ ಯುವಕನೊಬ್ಬ ಆಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಇದರಿಂದ ಆಕೆ ಗರ್ಭಿಣಿ ಆಗಲು ಕಾರಣವಾಯಿತು. ಆಕೆಯ ಹೆತ್ತವರು ಮುನ್ನೆಚ್ಚರಿಕೆ ವಹಿಸಿದ್ದರೆ ಮತ್ತು ಸ್ವತ: ಆ ಬಾಲಕಿ ಜಾಗೃತಳಾಗಿದ್ದರೆ ಹೀಗಾಗುತ್ತಿರಲಿಲ್ಲ ಎಂದರು.

ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಎಲ್ಲರ ಸಹಕಾರಬೇಕು. ಡ್ರಗ್ಸ್ ಪರೀಕ್ಷೆ ನಡೆಸಲು ಕೆಲವು ಕಾಲೇಜುಗಳು ಮಾತ್ರ ಮುಂದೆ ಬಂದಿದ್ದು, ಎಲ್ಲಾ ಕಾಲೇಜುಗಳು ಮುಂದೆ ಬರಬೇಕು. ಎಲ್ಲರ ಸಹಕಾರ ಸಿಕ್ಕಿದರೆ ಒಂದೆರಡು ವರ್ಷಗಳಲ್ಲಿ ಡ್ರಗ್ಸ್ ಮುಕ್ತ ಕ್ಯಾಂಪಸ್ ಮಾಡಬಹುದಾಗಿದೆ. ಮಕ್ಕಳ ಬಗ್ಗೆ ಪೋಷಕರು ಜಾಗೃತರಾಗಬೇಕು ಎಂದು ಕಮಿಷನ‌ರ್ ಹೇಳಿದರು.

Related Articles

Back to top button
error: Content is protected !!