ಖಾಸಗಿ ಅಂಗದಲ್ಲಿ ಡ್ರಗ್ಸ್ ಇಟ್ಟುಕೊಂಡು ಕಳ್ಳಸಾಗಣೆ: ಇಬ್ಬರು ಮಹಿಳೆ ಸೇರಿದಂತೆ 7 ಜನರ ಬಂಧನ
Views: 99
ಕನ್ನಡ ಕರಾವಳಿ ಸುದ್ದಿ: ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಶನಿವಾರ ಮಹಿಳೆಯರು ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದ್ದು, ಬಂಧಿಸುವ ವೇಳೆ ಮಹಿಳೆಯವರು ತಮ್ಮ ಖಾಸಗಿ ಅಂಗದ ಭಾಗಗಳಲ್ಲಿ ಎರಡು ಗ್ರಾಂ ಸಿಂಥೆಟಿಕ್ ಡ್ರಗ್ಸ್ ಇಟ್ಟುಕೊಂಡಿದ್ದರು ಎಂದು ವರದಿಯಾಗಿದೆ.
ಕೇರಳದ ತ್ರಿಶೂರ್ ನಗರ ಜಿಲ್ಲಾ ಮಾದಕವಸ್ತು ವಿರೋಧಿ ವಿಶೇಷ ಕಾರ್ಯಪಡೆಯು ಈ ಕಾರ್ಯಾಚರಣೆ ನಡೆಸಿದ್ದು, ಪಾಲಕ್ಕಾಡ್ನ ರೆಸಾರ್ಟ್ನಿಂದ ತ್ರಿಶೂರ್ಗೆ ಪ್ರಯಾಣಿಸುತ್ತಿದ್ದ ಸ್ವಿಫ್ಟ್ ಕಾರನ್ನು ವಾಣಿಯಂಪಾರದಲ್ಲಿ ವಾಹನ ತಪಾಸಣೆಯ ಸಮಯದಲ್ಲಿ ತಡೆದು ಪರಿಶೀಲನೆ ನಡೆಸಿದಾಗ ಡ್ರಗ್ಸ್ ಸಾಗಾಣೆ ಪತ್ತೆಯಾಗಿದ್ದು, ಏಳು ಮಂದಿಯನ್ನು ಬಂಧಿಸಿದೆ.
ಬಂಧಿತರನ್ನು ಶಿಫಾಸ್, ವಿದ್ಯಾ, ಜಿಷ್ಣು ಮತ್ತು ಶ್ರೀಲಕ್ಷ್ಮಿ ಎಂದು ಗುರುತಿಸಲಾಗಿದೆ. ಎಲ್ಲರೂ ಗುರುವಾಯೂರ್-ಪವರಟ್ಟಿ ಪ್ರದೇಶದವರು ಎನ್ನಲಾಗಿದೆ. ತಪಾಸಣೆ ವೇಳೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತಮ್ಮ ಗುಪ್ತಾಂಗಗಳಲ್ಲಿ ಎರಡು ಗ್ರಾಂ ಸಿಂಥೆಟಿಕ್ ಮಾದಕವಸ್ತುವನ್ನು ಮರೆಮಾಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಹಿಳೆಯರಿಂದ ಡ್ರಗ್ಸ್ ವಶಪಡಿಸಿಕೊಂಡ ಬಳಿಕ ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರು, ಆರೋಪಿಗಳ ವಿಚಾರಣೆಯ ಆಧಾರದ ಮೇಲೆ, ಅಧಿಕಾರಿಗಳು ಶಿಫಾಸ್ ಅವರ ಮನೆಯನ್ನು , ವಶಪಡಿಸಿಕೊಂಡಿದ್ದಾರೆ. ಅಲ್ಲಿಂದ ಚಾವಕ್ಕಾಡ್ನ ಪಂಚರಮುಕ್ಕುವಿನಲ್ಲಿರುವ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಕಾರ್ಯಾಗಾರಕ್ಕೆ ತೆರಳಿ ಅಲ್ಲಿ 288 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ತನಿಖೆಯ ಸಮಯದಲ್ಲಿ ಪೊಲೀಸರು ಮಾದಕವಸ್ತು ಜಾಲದ ಭಾಗವೆಂದು ಶಂಕಿಸಲಾಗಿರುವ ಮತ್ತೆ ಶಬೀರ್, ಅನ್ಮಾದ್ ಮತ್ತು ಟಿಟಿ ಸುಮೇಶ್ ಎಂಬ ಮೂವರನ್ನು ಬಂಧಿಸಿದ್ದು, ಉಳಿದ ಆರೋಪಿಗಳನ್ನು ಪತ್ತೆಹಚ್ಚಲು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಒಟ್ಟು 308 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದ್ದು, ಇತ್ತೀಚಿನ ತಿಂಗಳುಗಳಲ್ಲಿ ತ್ರಿಶೂರ್ ಜಿಲ್ಲೆಯಲ್ಲಿ ಪತ್ತೆಯಾದ ಅತಿದೊಡ್ಡ ಮಾದಕವಸ್ತು ಸಾಗಾಣೆ ಸಿಂಡಿಕೇಟ್ ಇದಾಗಿದೆ.






