ಯುವಜನ

ಪ್ರೇಯಸಿಯ ಜೊತೆ ಫೋಟೋ ಕ್ಲಿಕ್ಕಿಸುವಾಗ 400 ಅಡಿ ಆಳದ ಪ್ರಪಾತಕ್ಕೆ ಬಿದ್ದು ಪ್ರಿಯಕರ ಸಾವು 

Views: 42

ಕನ್ನಡ ಕರಾವಳಿ ಸುದ್ದಿ: ಪ್ರೇಯಸಿಯ ಜೊತೆ ಫೋಟೋ ಕ್ಲಿಕ್ಕಿಸುವಾಗ 400 ಅಡಿ ಆಳದ ಪ್ರಪಾತಕ್ಕೆ ಬಿದ್ದು ಪ್ರಿಯಕರ ಕಾಲು ಜಾರಿ ಬಿದ್ದು ಸಾವನಪ್ಪಿದ ಘಟನೆ ಲೋಹಗಡ ಕೋಟೆಯಲ್ಲಿ ನಡೆದಿದೆ.

ಪುಣೆಯ ಗಹುಂಜೆ ನಿವಾಸಿ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ (26) ಮವಲ್ ತಾಲೂಕಿನ ಐತಿಹಾಸಿಕ ಲೋಹಗಡ ಕೋಟೆಗೆ ಪ್ರವಾಸ ಹೋಗಿದ್ದರು. ತಮ್ಮ ಭಾವಿ ಪತ್ನಿಯ ಹುಟ್ಟುಹಬ್ಬದ ಆಚರಣೆಗಾಗಿ ಇಬ್ಬರು ಸ್ನೇಹಿತರೊಂದಿಗೆ ಅವರು ಅಲ್ಲಿಗೆ ತೆರಳಿದ್ದರು.

ಬೆಳಿಗ್ಗೆ ಸುಮಾರು 10:30 ರ ಸುಮಾರಿಗೆ, ಕೇತನ್ ಕೋಟೆಯ ಕಡಿದಾದ ಅಂಚಿನಲ್ಲಿ ನಿಂತು ಫೋಟೋಗಳನ್ನು ತೆಗೆಯುತ್ತಿದ್ದರು. ಈ ವೇಳೆ ಜೋರಾಗಿ ಬೀಸಿದ ಗಾಳಿಗೆ ಸಮತೋಲನ ಕಳೆದುಕೊಂಡ ಅವರು, ಕ್ಷಣಾರ್ಧದಲ್ಲಿ ಸುಮಾರು 400 ಅಡಿ ಆಳದ ಕಂದಕಕ್ಕೆ ಬಿದ್ದರು. ಕಣ್ಣೆದುರೇ ನಡೆದ ಈ ಭೀಕರ ಘಟನೆಯನ್ನು ಕಂಡು ಅವರ ಭಾವಿ ಪತ್ನಿ ಮತ್ತು ಸ್ನೇಹಿತರು ದಿಕ್ಕುತೋಚದಂತಾದರು.

ಕೇತನ್ ಅವರ ಸಾವು ಎರಡು ಕುಟುಂಬಗಳಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ. ಈ ವರ್ಷದ ನವೆಂಬರ್‌ನಲ್ಲಿ ಅವರ ಮದುವೆ ನಿಶ್ಚಯವಾಗಿತ್ತು. ಮದುವೆ ಸಮಾರಂಭಕ್ಕಾಗಿ ರಾಜಸ್ಥಾನದ ಉದಯ್‌ ಪುರದಲ್ಲಿ ಅರಮನೆಯೊಂದನ್ನು ಈಗಾಗಲೇ ಬುಕ್ ಮಾಡಲಾಗಿತ್ತು. ಮದುವೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದಾಗಲೇ ಈ ಅನಿರೀಕ್ಷಿತ ಘಟನೆ ಸಂಭವಿಸಿದೆ.

ಘಟನೆ ಸಂಭವಿಸಿದ ತಕ್ಷಣ ಪೊಲೀಸರು ಮತ್ತು ‘ಶಿವದುರ್ಗ ಮಿತ್ರ ತುರ್ತು ರಕ್ಷಣಾ ತಂಡ’ ಸ್ಥಳಕ್ಕೆ ಧಾವಿಸಿತು. ಕಡಿದಾದ ಬೆಟ್ಟ ಮತ್ತು ದಟ್ಟವಾದ ಗಿಡಗಂಟೆಗಳ ನಡುವೆ ಮೃತದೇಹವನ್ನು ಪತ್ತೆಹಚ್ಚುವುದು ಸವಾಲಿನ ಕೆಲಸವಾಗಿತ್ತು. ಸುಮಾರು ಮೂರು ಗಂಟೆಗಳ ಸತತ ಕಾರ್ಯಾಚರಣೆಯ ನಂತರ ರಕ್ಷಣಾ ತಂಡವು ಕೇತನ್ ಅವರ ಮೃತದೇಹವನ್ನು ಕಮರಿಯಿಂದ ಮೇಲಕ್ಕೆ ಎತ್ತಲಾಯಿತು.

 

Related Articles

Back to top button
error: Content is protected !!