ಬಸ್ರೂರು ಶ್ರೀ ಶಾರದ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ರೆಡ್ ಡೇ” ಆಚರಣೆ
Views: 89
ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದ ಆಂಗ್ಲ ಮಾಧ್ಯಮ ಶಾಲೆಯ ಕಿಂಡರ್ ಗಾರ್ಟನ್ ನಲ್ಲಿ ಜೂನ್ 16 ಮಂಗಳವಾರದಂದು ರೆಡ್ ಡೇ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಕ್ಕಳು ಕೆಂಪು ಬಣ್ಣದ ಉಡುಗೆಯನ್ನು ತೊಟ್ಟು ಕೆಂಪು ಬಣ್ಣಕ್ಕೆ ಸಂಬಂಧಿಸಿದ ವಿವಿಧ ಆಟಿಕೆಗಳು, ಹಣ್ಣುಗಳು ತರಕಾರಿಗಳು ಹಾಗೂ ಕರಕುಶಲ ವಸ್ತುಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಬಂದಿದ್ದರು. ನಂತರ ಮಕ್ಕಳು ತಂದಿರುವ ಕರಕುಶಲ ವಸ್ತುಗಳನ್ನು ಹಾಗೂ ಆಟಿಕೆಗಳನ್ನು ಅಲಂಕರಿಸಲಾಯಿತು.
ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ನಂತರ ಮಕ್ಕಳು ತಾವು ತಂದಿರುವ ವಸ್ತುಗಳ ಬಗ್ಗೆ ಒಂದೆರಡು ಮಾತನಾಡಿದರು.
ಮಕ್ಕಳು ರೆಡ್ ಡೇ ಗೆ ಸಂಬಂಧಿಸಿದ ಹಾಡಿಗೆ ನರ್ತಿಸಿ ಸಂಭ್ರಮಿಸಿದರು.
ಪ್ರಾಂಶುಪಾಲರಾದ ಶ್ರೀಮತಿ ಸುಪ್ರೀತಾ ಪೂಜಾರಿ ಇವರು ಕೆಂಪು ಬಣ್ಣ ಹಾಗೂ ಅದರ ವಿಶೇಷತೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶ್ರೀ ಸಂತೋಷ್ ಶೆಟ್ಟಿ ಇವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಶ್ರೀಮತಿ ವೈಶಾಲಿ ಶೆಟ್ಟಿ ಸ್ವಾಗತಿಸಿದರು. ಶ್ರೀಮತಿ ಸುಜಾತ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ರಜನಿ ಅಶೋಕ್ ವಂದಿಸಿದರು.






