ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಪಡೆದ ಅನಂತ್ ಅಂಬಾನಿ
Views: 42
ಕನ್ನಡ ಕರಾವಳಿ ಸುದ್ದಿ: ದೇಶದ ಖ್ಯಾತ ಉದ್ಯಮಿ, ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಭಾನುವಾರ ದೇಗುಲಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಅಂಬಾನಿ ಕುಟುಂಬದ ಗುರೂಜಿ ಜೊತೆ ಅನಂತ್ ಅಂಬಾನಿ ಕೊಲ್ಲೂರು ಮೂಕಾಂಬಿಕೆ ದೇವಿ ದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ ವಿಶೇಷ ಪೂಜೆ ಸಮರ್ಪಿಸಿದರು. ಮುಕಾಂಬಿಕಾ ಸನ್ನಿಧಾನದಲ್ಲಿ ಪೂಜೆ ಕೈಗೊಂಡರು. ದೇಗುಲಕ್ಕೆ ಆಗಮಿಸಿದ ಅನಂತ್ ಅಂಬಾನಿಗೆ ದೇವಾಲಯದ ಮಂಡಳಿ ವತಿಯಿಂದ ಗೌರವಾರ್ಪಣೆ ಮಾಡಲಾಯಿತು.
ಜೂನ್ 13ರಂದು ಅನಂತ್ ಅಂಬಾನಿ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ದಿನಾಂಕ ನಿಗದಿಯಾಗಿತ್ತು. ಆದರೆ ಮುಂಬೈನಲ್ಲಿ ಭಾರಿ ಮಳೆ ಕಾರಣದಿಂದ ಪ್ರವಾಸ ಮುಂದೂಡಲಾಗಿತ್ತು. ಇಂದು ಸಂಜೆ ವೇಳೆಗೆ ಕೊಲ್ಲೂರು ಮೂಕಾಂಬಿಕೆ ತಲುಪಿದ ಅನಂತ್ ಅಂಬಾನಿ ದೇವಿ ದರ್ಶನ ಪಡೆದರು.

ಅನಂತ ಅಂಬಾನಿಗೆ ದೇಗುಲದ ವತಿಯಿಂದ ಶಾಲು ಹೊದಿಸಿ ಶ್ರೀದೇವಿಯ ಕಲಾಕೃತಿ ನೀಡಿ ಸನ್ಮಾನಿಸಲಾಯಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಕಾರ್ಯ ನಿರ್ವಹಣಾ ಅಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಸಮಿತಿಯ ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಸುರೇಂದ್ರ ಶೆಟ್ಟಿ ಅಂಕದ ಕಟ್ಟೆ, ಅಭಿಲಾಷ್ ಪಿವಿ, ರಾಜೇಶ್ ಕಾರಂತ್ ಉಪ್ಪಿನ ಕುದ್ರು, ಮಹಾಲಿಂಗ ನಾಯ್ಕ ಸುಧಾ, ಧನಾಕ್ಷಿ ಸ್ವಾಗತಿಸಿದರು.






