ತುರ್ತು ಭೂಸ್ಪರ್ಶ ಮಾಡುವ ವೇಳೆ ರನ್‌ವೇಗೆ ಅಪ್ಪಳಿಸಿದ ಕ್ಷಣದಲ್ಲೇ ಬೆಂಕಿ ಉಂಡೆಯಾದ ವಿಮಾನ!
Views: 72
ಕನ್ನಡ ಕರಾವಳಿ ಸುದ್ದಿ: ಕೆರಿಬಿಯನ್ ರಾಷ್ಟ್ರವಾದ ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ವಿಮಾನ ಭೀಕರ ಅಪಘಾತ ಸಂಭವಿಸಿದೆ. ತುರ್ತು ಭೂಸ್ಪರ್ಶ ಮಾಡುವ ವೇಳೆ ಖಾಸಗಿ ವಿಮಾನ ರನ್‌ವೇಗೆ ಅಪ್ಪಳಿಸಿ ಬೆಂಕಿ ಉಂಡೆಯಾಗಿ ಮಾರ್ಪಟ್ಟಿದೆ.

ಕೆರಿಬಿಯನ್ ರಾಷ್ಟ್ರವಾದ ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ವಿಮಾನ ಭೀಕರ ಅಪಘಾತ ಸಂಭವಿಸಿದೆ. ತುರ್ತು ಭೂಸ್ಪರ್ಶ ಮಾಡುವ ವೇಳೆ ಖಾಸಗಿ ವಿಮಾನ ರನ್‌ವೇಗೆ ಅಪ್ಪಳಿಸಿ ಬೆಂಕಿ ಉಂಡೆಯಾಗಿ ಮಾರ್ಪಟ್ಟಿದೆ. ದುರಂತದಲ್ಲಿ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ದುರ್ಮರಣಕ್ಕೀಡಾಗಿದ್ದಾರೆ.
ಏನಿದು ಘಟನೆ?
ಡೊಮಿನಿಕನ್ ರಿಪಬ್ಲಿಕ್‌ನ ‘ಲಾ ರೊಮಾನಾ’ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ. ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲು ಪೈಲಟ್‌ಗಳು ಪ್ರಯತ್ನಿಸಿದ್ದರು. ವಿಮಾನವು ರನ್‌ವೇಯನ್ನು ಸ್ಪರ್ಶಿಸಿದ ತಕ್ಷಣವೇ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ.
ಕ್ಷಣಮಾತ್ರದಲ್ಲಿ ಇಡೀ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಸ್ಫೋಟಗೊಂಡು ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿದೆ.
ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೆ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ವಿಮಾನ ಅಪಘಾತಕ್ಕೆ ನಿಖರವಾದ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.






