ಕಟಪಾಡಿಯಲ್ಲಿ ದಿಕ್ಕು ತೋಚದ ವೃದ್ಧರೊಬ್ಬರನ್ನು ಮನೆಗೆ ತಲುಪಿಸಿದ ಸಮಾಜಸೇವಕರು

Views: 6
ಕುಂದಾಪುರ ತಾಲೂಕಿನ ಆನೆಗುಡ್ಡೆ ಸಮೀಪ ವಾದಿರಾಜ ಮಠದ ರಸ್ತೆಯ ಪಕ್ಕದ ವಕ್ವಾಡಿ ನಿವಾಸಿಯಾಗಿರುವ ವೃದ್ಧರೊಬ್ಬರು ಕುಂದಾಪುರದಿಂದ ಕಟಪಾಡಿಗೆ ಬಸ್ಸಿನಲ್ಲಿ ಹೋಗಿ ದಿಕ್ಕು ತೋಚದೆ ಸಂಕಷ್ಟದಲ್ಲಿರುವ ಅವರನ್ನು ಕಟಪಾಡಿಯ ಸಮಾಜಸೇವಕರು ಮನೆಗೆ ತಲುಪಿಸುವಲ್ಲಿ ಮಾನವೀಯತೆ ಮೆರೆದಿದ್ದಾರೆ.
ವಯೋವೃದ್ಧ ವಿಠಲ್ ಗಾಣಿಗ ಎಂಬುವವರು ಕಟಪಾಡಿಯಲ್ಲಿ ಬಸ್ಸಿನಿಂದ ಇಳಿದು ಮೆಡಿಕಲ್ ಚೀಟಿಯನ್ನು ತೋರಿಸಿ ಔಷಧಿ ಬೇಕಾಗಿದೆ ಎಂದು ಕೇಳಿಕೊಂಡಿದ್ದಾರೆ.ತೀವ್ರ ಅಸ್ವಸ್ಥದಲ್ಲಿರುವ ಇವರ ಬಗ್ಗೆ ಮಾಹಿತಿ ಕೇಳಿದಾಗ ಸ್ಪಷ್ಟ ಮಾಹಿತಿ ಸಿಗದೇ ಇರುವುದರಿಂದ ಕಟಪಾಡಿಯ ಸಮಾಜ ಸೇವಕರಾದ ಆಟೋ ಡ್ರೈವರ್ ದಿನೇಶ್ ಪೂಜಾರಿ ಫೋಟೋಗ್ರಾಫರ್ ನಾರಾಯಣ ಕುಂದರ್ ಅವರು ಕಟಪಾಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಇವರ ಆಧಾರ್ ಕಾರ್ಡ್ ವಿಳಾಸದಂತೆ ಕುಂದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು.. ವಕ್ವಾಡಿಯ ನಿವಾಸಿ ಕಾಳಾವರ ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಶೆಟ್ಟಿ ಅವರನ್ನು ಸಂಪರ್ಕ ಸಾಧಿಸಿ ವಿಠಲ್ ಗಾಣಿಗ ಅವರನ್ನು ಕಟಪಾಡಿಯಿಂದ ರಿಕ್ಷಾದಲ್ಲಿ ಕರೆದುಕೊಂಡು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.






