ಗಂಡ ಕೆಲಸಕ್ಕೆ ಹೋದನೆಂದು ಪ್ರಿಯಕರನನ್ನು ಭೇಟಿ ಮಾಡಲು ಶಾಪಿಂಗ್ ಮಾಲ್ ಗೆ ಹೋದವಳು ಪತಿಯ ಕೈಯ್ಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದು ಧರ್ಮದೇಟು
Views: 123
ಕನ್ನಡ ಕರಾವಳಿ ಸುದ್ದಿ: ಗಂಡ ಕೆಲಸಕ್ಕೆ ಹೋದನೆಂದು ಪ್ರಿಯಕರನನ್ನು ಭೇಟಿ ಮಾಡಲು ಶಾಪಿಂಗ್ ಮಾಲ್ ಗೆ ಹೋದವಳು ಪತಿಯ ಕೈಯ್ಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದು ಧರ್ಮದೇಟು ತಿಂದ ಘಟನೆ ನೋಯ್ತಾದ ಜುಡಿಯೋ ಸ್ಟೋರ್‌ನಲ್ಲಿ ನಡೆದಿದೆ.
ಆದರೆ, ಇದೇ ವೇಳೆ ಮಹಿಳೆಯ ಪತಿ ಯಾವುದೇ ಸುಳಿವು ಇಲ್ಲದೆ ಇದ್ದಕ್ಕಿದ್ದಂತೆ ಅದೇ ಸ್ಟೋರ್‌ಗೆ ಭೇಟಿ ನೀಡಿದ್ದಾನೆ. ಅಲ್ಲಿ ತನ್ನ ಪತ್ನಿ ಮತ್ತೊಬ್ಬ ಯುವಕನ ಜೊತೆ ಆಪ್ತವಾಗಿ ಇರುವುದನ್ನು ಕಂಡು ಆತ ತೀವ್ರ ಆಕ್ರೋಶಗೊಂಡಿದ್ದಾನೆ.
ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಒಟ್ಟಿಗೆ ನೋಡಿ ಸಿಟ್ಟಾದ ಪತಿ, ತಕ್ಷಣವೇ ಪತ್ನಿಯನ್ನು ಹಿಡಿದು ಸ್ಟೋರ್‌ನಿಂದ ಹೊರಗಡೆ ಎಳೆದುಕೊಂಡು ಬಂದಿದ್ದಾನೆ. ಅಂಗಡಿಯಿಂದ ಹೊರಗೆ ಬರುತ್ತಿದ್ದಂತೆ ರಸ್ತೆಯಲ್ಲೇ ಪತ್ನಿ ಮತ್ತು ಆಕೆಯ ಪ್ರಿಯಕರನಿಗೆ ಮನಬಂದಂತೆ ರಕ್ತ ಬರುವಂತೆ ಥಳಿಸಿದ್ದಾರೆ. ಈ ಹಠಾತ್ ದಾಳಿಯಿಂದಾಗಿ ಇಡೀ ಜುಡಿಯೋ ಸ್ಟೋರ್ ಮುಂಭಾಗದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಗಂಡ ಹೆಂಡತಿಯ ಮಧ್ಯೆ ನಡೆಯುತ್ತಿರುವ ಜಗಳ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸ್ಥಳಕ್ಕೆ ಜಮಾಯಿಸಿದ್ದರು. ಗಲಾಟೆ ವಿಕೋಪಕ್ಕೆ ಹೋದಂತೆ ಸಾರ್ವಜನಿಕರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಈ ಘಟನೆಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಸ್ಥಳೀಯ ಪೊಲೀಸರ ಪ್ರಕಾರ ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಕಡೆಯಿಂದ ಅಧಿಕೃತವಾಗಿ ಲಿಖಿತ ದೂರು ದಾಖಲಾಗಿಲ್ಲ. “ಪ್ರಸ್ತುತ ಘಟನೆಯ ವಿಡಿಯೋ ನಮಗೂ ಲಭ್ಯವಾಗಿದೆ. ಆದರೆ ಸಂತ್ರಸ್ತರಿಂದ ಅಥವಾ ಸಂಬಂಧಪಟ್ಟವರಿಂದ ಅಧಿಕೃತ ದೂರು ಬಂದ ನಂತರವಷ್ಟೇ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ನೋಯ್ಡಾ ಪೊಲೀಸರು ತಿಳಿಸಿದ್ದಾರೆ.






