ಜನಮನ

ಪತ್ನಿಯ ಬೆರಳನ್ನು ಕಚ್ಚಿ ತಿಂದ ಪತಿ

Views: 0

ಪತಿ- ಪತ್ನಿ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಪತಿ ಮಹಾಶಯನೊಬ್ಬ ತನ್ನ ಪತ್ನಿಯ ಬೆರಳನ್ನೇ ಕಚ್ಚಿ ತಿಂದಿರುವ ಭಯಾನಕ ಘಟನೆ ಬೆಂಗಳೂರಿನ ಕೋಣನ ಗುಂಟೆಯಲ್ಲಿ ನಡೆದಿದೆ.

ಪುಷ್ಪ ಎಂಬ ಮಹಿಳೆ ಪತಿಯ ಕಾಟಕ್ಕೆ ಬೇಸತ್ತು ಪತಿಯಿಂದ ದೂರವಾಗಿ ಮಗನೊಂದಿಗೆ ಬೇರೆ ಕಡೆ ವಾಸವಾಗಿದ್ದಳು. ಆದರೂ ಗಂಡನ ಕಾಟ ಮಾತ್ರ ತಪ್ಪಲಿಲ್ಲ ಮನೆಗೆ ಬಂದ ಪತ್ನಿ ಜೊತೆ ಜಗಳವಾಡಿದ್ದಾನೆ.

ಗಲಾಟೆ ನಡುವೆ ಪತ್ನಿಯ ಕೈ ಹಿಡಿದೆಳೆದಿದ್ದು, ಆಕೆಯ ಬೆರಳನ್ನು ಕಚ್ಚಿ ತಿಂದಿದ್ದಾನೆ. ಅಷ್ಟೇ ಅಲ್ಲ ನಿನ್ನನ್ನು ಇದೇ ರೀತಿ ತಿನ್ನುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ.

Related Articles

Back to top button
error: Content is protected !!