ಇತರೆ

ಕುಂದಾಪುರ: ಲೋನ್ ಕೊಡಿಸುವುದಾಗಿ ಫೇಸ್‌ ಬುಕ್ ಮೂಲಕ ಲಕ್ಷಾಂತರ ರೂ.ವಂಚನೆ 

Views: 77

ಕನ್ನಡ ಕರಾವಳಿ ಸುದ್ದಿ: ಫೇಸ್‌ ಬುಕ್ ಮೂಲಕ ಪಿಎಂಜಿಡಿವೈ ಯಲ್ಲಿ 40 ಲಕ್ಷ ರೂ. ಲೋನ್ ಕೊಡಿಸುವುದಾಗಿ ಶ್ರೀನಿವಾಸ್ ರಾವ್ ಎನ್ನುವ ಹೆಸರಿನ ವ್ಯಕ್ತಿಯು ನನ್ನಿಂದ 5.69 ಲಕ್ಷ ರೂ. ಹಣ ಪಡೆದು, ವಂಚಿಸಿರುವುದಾಗಿ ಇಲ್ಲಿನ ಖಾರ್ವಿಕೇರಿಯ ನಿವಾಸಿ ಪ್ರಣೀತಾ (38) ದೂರು ನೀಡಿದ್ದಾರೆ.

ಇವರು ಫೇಸ್ ಬುಕ್ ನೋಡುತ್ತಿದ್ದಾಗ ಪಿಎಂಜಿಡಿವೈಯಲ್ಲಿ ಲೋನ್ ಕೊಡಿಸುವುದಾಗಿ ಬರೆದಿದ್ದು, ಅದರಲ್ಲಿ ಹಣ ಬೇಕಾಗಿದ್ದಲ್ಲಿ ಒಂದು ನಂಬರ್ ಗೆ ಕರೆ ಮಾಡುವಂತೆ ಕೂಡ ತಿಳಿಸಲಾಗಿತ್ತು. ಆ ನಂಬರ್ ಗೆ ಪ್ರಣೀತಾ ಅವರು ಕರೆ ಮಾಡಿದ್ದು, ಆಗ ಹೆಸರು ಶ್ರೀನಿವಾಸ್ ರಾವ್ ಎಂದು ಹೇಳಿದ್ದಾರೆ. 40 ಲಕ್ಷ ರೂ. ಲೋನ್ ಕೊಡಿಸುವುದಾಗಿ ಹೇಳಿ, ಅದಕ್ಕೂ ಮೊದಲು ಹಣವನ್ನು ಹಾಕಬೇಕು ಎಂದು ಹೇಳಿದ್ದು, ಅದರಂತೆ ಕಳೆದ ಮಾರ್ಚ್ ನಲ್ಲಿ 5,69,069 ರೂ. ಹಣವನ್ನು ಫೋನ್ ಪೇ ಮೂಲಕ ಬ್ಯಾಂಕ್ ಖಾತೆಗೆ ಹಣ ಕಳುಹಿಸಿದ್ದಾರೆ. ಅನಂತರ ಹಣವನ್ನು ವಾಪಾಸು ನೀಡುವಂತೆ ಕೇಳಿದಾಗ ಆರೋಪಿಯು ಹಣ ಇನ್ನೂ ಹಾಕುವಂತೆ ಹೇಳಿದ್ದಾನೆ. ಲೋನ್ ಹಣ ಕೊಡಿಸುವುದಾಗಿ ಹಣ ಪಡೆದು, ವಾಪಾಸು ನೀಡದೇ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!