ಇತರೆ
ಅಮಾಸೆಬೈಲು: ತೆಂಗಿನ ಕಾಯಿ ಕೊಯ್ಯುವಾಗ ಮರದಿಂದ ಜಾರಿ ಬಿದ್ದು ಸಾವು
Views: 155
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಅಮಾಸೆಬೈಲಿನ ಮಚ್ಚಟ್ಟಿನಲ್ಲಿ ಮನೆಯ ತೋಟದಲ್ಲಿ ತೆಂಗಿನ ಕಾಯಿ ಕೊಯ್ಯುವಾಗ ವ್ಯಕ್ತಿಯೊಬ್ಬರು ಮರದಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮಚ್ಚಟ್ಟು ಪರಮೇಶ್ವರ ನಾಯ್ಕ (55) ಅವರು ಕೈ ಜಾರಿ 30 ಅಡಿ ಎತ್ತರದಿಂದ ಕೆಳಗೆ ಬಿದ್ದು ಮೃತಪಟ್ಟವರು.
ಮೃತರ ಸಹೋದರ ವಂದ್ರ ನಾಯ್ಕ ಮಚ್ಚಟ್ಟು ಅವರು ಪೊಲೀಸರಿಗೆ ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






