ಜನಮನ

ಕಲುಷಿತ ನೀರು ಸೇವಿಸಿ 2 ಸಾವು 36 ಮಂದಿ ಅಸ್ವಸ್ಥ

Views: 0

ಚಿತ್ರದುರ್ಗ ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಮೃತಪಟ್ಟು 36 ಮಂದಿ ಅಸ್ವಸ್ಥಗೊಂಡಿದ್ದಾರೆ .

ಇವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ.

ಮೃತರನ್ನು ಚಿತ್ರದುರ್ಗ ನಿವಾಸಿಯಾಗಿರುವ ಮಂಜುಳಾ (23 )ರಘು (27 )ಎಂದು ಗುರುತಿಸಲಾಗಿದೆ.

ನಗರಸಭೆಯಿಂದ ಪೂರೈಕೆಯಾಗುವ ನೀರನ್ನು ಸೇವಿಸಿ ಈ ಘಟನೆ ಸಂಭವಿಸಿದೆ.

ತೀವ್ರ ವಾಂತಿಬೇದಿಯಿಂದ ಅಸ್ವಸ್ಥರಾದ ಕೆಲವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಗಂಭೀರ ಸ್ಥಿತಿಯಲ್ಲಿರುವವರನ್ನು ಪಕ್ಕದ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ನೀರು ಕಲುಷಿತಕ್ಕೆ ನಿಜವಾದ ಕಾರಣವನ್ನು ಕಂಡುಹಿಡಿಯಲು ಅಸ್ವಸ್ಥಗೊಂಡವರು ಕುಡಿಯುವ ನೀರು, ಮಲ ಮೂತ್ರಗಳನ್ನು ಪರೀಕ್ಷೆಗಾಗಿ ಪ್ರಯೋಗಕ್ಕೆ ಕಳಿಸಲಾಗಿದೆ ಎಂದು ತಿಳಿದುಬಂದಿದೆ

Related Articles

Back to top button
error: Content is protected !!