ಜನಮನ
ಉಪ್ಪುಂದ ದೋಣಿ ಮುಳುಗಡೆ: ನಾಪತ್ತೆಯಾದ ಮೀನುಗಾರನ ಶವಪತ್ತೆ

Views: 0
ಉಪ್ಪುಂದ ಮೆಡಿಕಲ್ ಕರ್ಕಿಕಳಿ ಕಡಲ ತೀರದಲ್ಲಿ ದೋಣಿ ದುರಂತದಲ್ಲಿ ಒಬ್ಬರು ಶವ ಪತ್ತೆಯಾಗಿದ್ದು, ನಾಪತ್ತೆಯಾಗಿದ್ದ ಸತೀಶ್ ಕಾರ್ವಿ (30 ) ಅವರ ಶವ ಮಂಗಳವಾರ ತಡರಾತ್ರಿ ಕೊಡೇರಿ ಸಮೀಪದಲ್ಲಿ ಪತ್ತೆಯಾಗಿದೆ.
ಡ್ರೋನ್ ಕೆಮರಾ ಬಳಸಿ ಶೋಧ ಕಾರ್ಯ ನಡೆಸಿದ್ದರು. ಬೈಂದೂರು ಠಾಣೆಯ ಮಹೇಶ್ ಮತ್ತು ಸಿಬ್ಬಂದಿ ಹಾಗೂ ಗಂಗೊಳ್ಳಿ ಠಾಣ ಪೊಲೀಸ್ ಕಾವಲು ಪಡೆ, ಠಾಣೆಯ ಪಿಐ ನಂಜಪ್ಪ ಮತ್ತು ಸಿಬ್ಬಂದಿ, ಕರಾವಳಿ ಪೊಲೀಸ್ ಪಡೆಯ ಮಾರ್ಗದರ್ಶನದಲ್ಲಿ ನಾಪತ್ತೆಯಾದ ಯುವಕನ ಶೋಧ ಕಾರ್ಯದಲ್ಲಿ ಪತ್ತೆಹಚ್ಚುವಲ್ಲಿ ಯಶಸ್ಸಿಯಾಗಿ ದ್ದಾರೆ.
ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ ಸ್ಥಳಕ್ಕೆ ಭೇಟಿ ನೀಡಿ ಮೀನುಗಾರರ ಕುಟುಂಬಕ್ಕೆ 6 ಲಕ್ಷದ ಪರಿಹಾರ ಚೆಕ್ ಹಸ್ತಾಂತರಿಸಿದರು.






