ಅಶ್ಲೀಲ ಮೆಸೇಜ್ ಕಳಿಸಿದ್ದ ವ್ಯಕ್ತಿಗೆ ನಟಿ ಚೈತ್ರಾ ಆಚಾರ್ ತಕ್ಕ ಪಾಠ!
Views: 48
ಕನ್ನಡ ಕರಾವಳಿ ಸುದ್ದಿ: ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ ಸಂದೇಶ ಕಳಿಸಿದ್ದ ವ್ಯಕ್ತಿಯೊಬ್ಬರಿಗೆ ನಟಿ ಚೈತ್ರಾ ಆಚಾರ್ ಅವರು ತಕ್ಕ ಪಾಠ ಕಲಿಸಿದ್ದಾರೆ.
ಚೈತ್ರಾ ಅವರಿಗೆ ಮಹೇಶ್ ಹೊಸ್ಮನಿ ಎಂಬುವರು ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ ಸಂದೇಶ ಕಳಿಸಿದ್ದರು. ಆ ವ್ಯಕ್ತಿಯ ಮೆಸೇಜ್ ಸ್ಕ್ರೀನ್ ಶಾರ್ಟ್ ತೆಗೆದ ಚೈತ್ರಾ , ‘ಈ ವ್ಯಕ್ತಿ ಪೊಲೀಸ್ ಇಲಾಖೆಗೆ ಸಂಬಂಧಿಸಿದವರೇ? ಇವರು ಕಾನೂನು ಪಾಲನೆ ಮಾಡುವ ಬದಲು, ನೈತಿಕ ಪೊಲೀಸ್‌ಗಿರಿ ಮಾಡುತ್ತಿರುವಂತೆ ಕಾಣುತ್ತಿದೆ. ದಯವಿಟ್ಟು ಈ ವ್ಯಕ್ತಿಯ ವಿರುದ್ಧ ಕ್ರಮ ತೆಗೆದುಕೊಳ್ಳಿ’ ಎಂದು ಬರೆದು ಬೆಂಗಳೂರು ನಗರ ಪೊಲೀಸ್‌ರನ್ನು ಟ್ಯಾಗ್ ಮಾಡಿ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.

ನಟಿ ಯಾವಾಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕವಾಗಿ ಪೋಸ್ಟ್ ಮಾಡಿದರೋ, ಅಲ್ಲಿಯವರೆಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಮಹೇಶ್ ಹೊಸಮನಿ ಬೆಚ್ಚಿಬಿದ್ದಿದ್ದಾನೆ. ತನ್ನ ಕೆರಿಯರ್‌ಗೆ ತೊಂದರೆಯಾಗಬಹುದು ಎಂದು ಅರಿತ ಆತ, ತಕ್ಷಣ ನಟಿಗೆ ಸಂದೇಶ ಕಳುಹಿಸಿ ಕ್ಷಮೆಯಾಚಿಸಿದ್ದಾನೆ. “ಸಾರಿ ಮೇಡಂ, ಅಕ್ಷರಗಳು ತಪ್ಪಾಗಿರಬಹುದು ಆದರೆ ನಾನು ನಿಮ್ಮ ಮೇಲಿನ ಕಾಳಜಿಯಿಂದ ಹಾಗೆ ಹೇಳಿದೆ. ನಾನು ನಿಮ್ಮ ಅಭಿಮಾನಿ, ದಯವಿಟ್ಟು ಸ್ಟೋರಿ ತೆಗೆಯಿರಿ, ಇದು ನನ್ನ ವೃತ್ತಿಜೀವನಕ್ಕೆ ಸಮಸ್ಯೆಯಾಗುತ್ತದೆ” ಎಂದು ಗೋಗರೆದಿದ್ದಾನೆ.
ಇದಕ್ಕೆ ಉತ್ತರಿಸಿದ ಚೈತ್ರಾ ಅವರು ನಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡುವಾಗ ನಾವು ಸುಮ್ಮನೆ ಇರಬೇಕು, ಆದರೆ ಅವರ ವಿಷಯ ಬಂದಾಗ ನಿಯಮಗಳು ಬದಲಾಗುತ್ತವೆಯೇ? ಎಂದು ಕೇಳಿದ್ದಾರೆ.






