ಯುವಜನ

ವಿವಾಹ ನಿಶ್ಚಯವಾಗಿದ್ದ ಯುವಕ ಬೈಕ್ ಅಪಘಾತದಲ್ಲಿ ಸಾವು: ನೊಂದ ಯುವತಿ ಆತ್ಮಹತ್ಯೆ

Views: 73

ಕನ್ನಡ ಕರಾವಳಿ ಸುದ್ದಿ: ಮದುವೆ ನಿಶ್ಚಿತಾರ್ಥ ನಡೆದ ಯುವಕ ಬೈಕ್ ಅಪಘಾತದಲ್ಲಿ ಸಾವಿಗೀಡಾದ ಹಿನ್ನೆಲೆಯಲ್ಲಿ ಮನನೊಂದು ಯುವತಿ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡಿನಲ್ಲಿ ಸಂಭವಿಸಿದೆ.

ಕುಂಟಗೇರಡ್ಕದ ಜನಾರ್ದನ ಎಂಬವರ ಪುತ್ರಿ ಪ್ರಫುಲ್ಲಾ(26) ಮೃತಪಟ್ಟವರು.

ತಮಿಳುನಾಡು ಮೂಲದ ಮಣಿ ಎಂಬ ಯುವಕನ ಜೊತೆ ನಾಲ್ಕು ತಿಂಗಳ ಹಿಂದೆ ಪ್ರಫುಲ್ಲಾರಿಗೆ ವಿವಾಹ ನಿಶ್ಚಯವಾಗಿತ್ತು. ತಿಂಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಣಿ, ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಇದಾದ ಬಳಿಕ ಪ್ರಫುಲ್ಲಾ ಮಾನಸಿಕವಾಗಿ ಕುಗ್ಗಿದ್ದರು.

ಮೇ 10ರಂದು ಮನೆಮಂದಿ ವಿವಾಹ ಕಾರ್ಯಕ್ರಮಕ್ಕೆ ತೆರಳಿದ್ದು, ಮನೆಗೆ ಮರಳಿದಾಗ ಪ್ರಫುಲ್ಲಾ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಫುಲ್ಲಾ ಡೆತ್ ನೋಟ್ ಬರೆದಿಟ್ಟಿದ್ದು, ಮಣಿಯವರ ಅಂತ್ಯಕ್ರಿಯೆ ನಡೆಸಿದ ಸ್ಥಳದಲ್ಲೇ ತನ್ನ ಅಂತ್ಯ ಕ್ರಿಯೆ ನಡೆಸುವಂತೆ ಬರೆದಿದ್ದಾರೆನ್ನಲಾಗಿದೆ.

ಅದರಂತೆ ಎರಡು ಮನೆಯವರು ಒಮ್ಮತದ ನಿರ್ಧಾರ ಕೈಗೊಂಡಿದ್ದು, ಮೃತ ದೇಹವನ್ನು ತಮಿಳುನಾಡಿಗೆ  ಕೊಂಡೊಯ್ಯುಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ

ತಮಿಳುನಾಡು ನಿವಾಸಿಯಾಗಿದ್ದ ಮಣಿ ಬ್ಯಾಂಕ್ ನೌಕರರಾಗಿದ್ದರು. ನವಂಬ‌ರ್ ಬಳಿಕ ಇವರ ವಿವಾಹ ನಡೆಸುವ ಬಗ್ಗೆ ಕುಟುಂಬಸ್ಥರು ತೀರ್ಮಾನಿಸಿದ್ದರು ಎಂದು ತಿಳಿದುಬಂದಿದೆ.

Related Articles

Back to top button
error: Content is protected !!