ಕೋವಿಡ್‌ಗಿಂತ ಬಂತು ಡೇಂಜರ್ ‘ಹಂಟಾ ವೈರಸ್’ ಪತ್ತೆಯಾಗಿದ್ದು ಎಲ್ಲಿ?
Views: 75
ಕನ್ನಡ ಕರಾವಳಿ ಸುದ್ದಿ: ಜಾಗತಿಕವಾಗಿ ವೇಗವಾಗಿ ಹರಡುವ ಈ ಸಾಂಕ್ರಾಮಿಕ ಸೋಂಕುಗಳು ಜನರಲ್ಲಿ ಭಾರೀ ಆತಂಕ ಹಾಗೂ ಭಯದ ಭೀತಿಯನ್ನು ಸೃಷ್ಟಿಸುತ್ತದೆ. 2020ರಲ್ಲಿ ಇಡೀ ಜಗತ್ತನ್ನೇ ನಡುಗಿಸಿದ ಕೋವಿಡ್ ವೈರಸ್ಗೆ ಭಾರತ ಸೇರಿ ಅನೇಕ ರಾಷ್ಟ್ರಗಳು ತತ್ತರಿಸಿತ್ತು. ಇದೀಗ ಅದೇ ರೀತಿಯ ಮತ್ತೊಂದು ವೈರಸ್ ಬೆಳಕಿಗೆ ಬಂದಿದ್ದು, ಸೌತ್ ಅಥ್ಲಾಂಟಿಕ್ನ ಕ್ರೂಸ್ ಹಡಗಿನಲ್ಲಿ ಕೇಸ್ಗಳು ದೃಢವಾಗಿವೆ.
ಹ್ಯಾಂಟವೈರಸ್ ಪ್ರಕರಣಗಳು ವರದಿಯಾದ ಬೆನ್ನಲ್ಲೇ ವಿಶ್ವಾದ್ಯಂತ ಭಾರೀ ಚರ್ಚೆಗಳು ಭುಗಿಲೆದ್ದಿವೆ. ಇಬ್ಬರು ಭಾರತೀಯ ಸಿಬ್ಬಂದಿ ಮತ್ತು ಹಲವಾರು ಸೋಂಕು ತಗುಲಿದ ಪ್ರಯಾಣಿಕರಿಗೆ ಪಾಸಿಟಿವ್ ಬಂದಿರುವ ಮಾಹಿತಿ ಲಭಿಸಿದೆ. ಹೀಗಾಗಿ, ಭಾರತೀಯರಲ್ಲೂ ಈ ಭಯ ಕಾಡಲಾರಂಭಿಸಿದೆ. ಆದಾಗ್ಯೂ, ಈ ವೈರಸ್ ಬಗ್ಗೆ ತೀರ ಚಿಂತಿಸುವ ಅಥವಾ ಹೆದರುವ ಅಗತ್ಯವೇನಿಲ್ಲ ಎಂದು ಭಾರತೀಯ ವೈದ್ಯಕೀಯ ತಜ್ಞರು ಹೇಳಿದ್ದಾರೆ.
ಏನಿದು ಹ್ಯಾಂಟವೈರಸ್?
ಹ್ಯಾಂಟವೈರಸ್ ಮುಖ್ಯವಾಗಿ ಇಲಿಗಳು ಮತ್ತು ಇತರ ಸಣ್ಣ ಪ್ರಾಣಿಗಳಿಂದ ಹರಡುವ ಒಂದು ಸೋಂಕಾಗಿದೆ. ಇಲಿಯ ಮೂತ್ರ, ಮಲ ಅಥವಾ ಲಾಲಾರಸದಲ್ಲಿರುವ ವೈರಸ್ ಕಣಗಳು ಗಾಳಿಯಲ್ಲಿ ಸೇರಿ ಮಾನವರು ಸೋಂಕಿಗೆ ಒಳಗಾಗುವ ಸಾಧ್ಯತೆಗಳಿವೆ. ಆದರಿದು, ಕೊರೊನಾ ಸೋಂಕಿನಂತೆ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುವುದಿಲ್ಲ ಎಂದು ತಜ್ಞರು ತಿಳಿಸಿರುವುದು ಗಮನಾರ್ಹ.
ಕ್ರೂಸ್ ಹಡಗಿನಲ್ಲಿ ಹೇಗೆ ಪತ್ತೆ?
149 ಪ್ರಯಾಣಿಕರನ್ನು ಹೊತ್ತೊಯ್ಯುವ ಕ್ರೂಸ್ ಹಡಗಿನಲ್ಲಿ ಹ್ಯಾಂಟವೈರಸ್ ಪ್ರಕರಣಗಳು ಹರಡಿರುವುದು ಪತ್ತೆಯಾಗಿದೆ. ತಜ್ಞರ ಪ್ರಕಾರ, ಇಲಿಗಳು ಸುತ್ತುವರಿದ ಸ್ಥಳಗಳಲ್ಲಿ ಸಂಚರಿಸುವ ಸಾಧ್ಯತೆ ಹೆಚ್ಚು. ಇವು ಕೆಮ್ಮಿದಾಗ, ಸೀನಿದಾಗ ಅಥವಾ ವೈರಸ್ ಕಣಗಳನ್ನು ಗಾಳಿಯಲ್ಲಿ ತೇಲಿಸಿದಾಗ, ಅವು ಪ್ರಯಾಣಿಕರ ಉಸಿರಿನಲ್ಲಿ ಸೇರಿ ಸೋಂಕಿಗೆ ಒಳಗಾಗಿರಬಹುದು ಎಂದು ವಿವರಿಸಲಾಗಿದೆ.
ಭಾರತದಲ್ಲಿ ಪರಿಸ್ಥಿತಿ ಏನು?
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ವೈದ್ಯಕೀಯ ತಜ್ಞರ ಪ್ರಕಾರ, ದೇಶದಲ್ಲಿ ಹ್ಯಾಂಟವೈರಸ್ ಹರಡುವಿಕೆಗೆ ಪ್ರಸ್ತುತ ಯಾವುದೇ ಪುರಾವೆಗಳಿಲ್ಲ. ಪುಣೆಯಲ್ಲಿರುವ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ನಿರ್ದೇಶಕ ಡಾ. ನವೀನ್ ಕುಮಾರ್, ಇದು ಕೊರೊನಾದಂತಹ ಸಾಂಕ್ರಾಮಿಕ ರೋಗವೇನಲ್ಲ ಎಂದು ಹೇಳಿದ್ದಾರೆ. ಏಷ್ಯಾ ಮತ್ತು ಯುರೋಪ್‌ನಲ್ಲಿ ಕಂಡುಬರುವ ಹ್ಯಾಂಟವೈರಸ್‌ಗಳು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತೀಯ ಸಿಬ್ಬಂದಿಗಳಲ್ಲಿ ಪತ್ತೆಯಾದ ಪ್ರಕರಣಗಳು ವಿದೇಶಗಳಿಂದ ಬಂದಿದ್ದು, ದೇಶೀಯವಾಗಿ ಹರಡುತ್ತಿಲ್ಲ ಎಂದಿದ್ದಾರೆ.
ಕೋವಿಡ್ಗೂ ಇದಕ್ಕೂ ವ್ಯತ್ಯಾಸವೇನು?
ಕೊರೊನಾ ವೈರಸ್ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಉಸಿರಾಟದ ಮೂಲಕ ವೇಗವಾಗಿ ಹರಡುತ್ತದೆ. ಆದರೆ, ಹ್ಯಾಂಟವೈರಸ್ ಇಲಿಗಳಂತಹ ಜೀವಿಗಳ ಮೂಲಕ ಮಾತ್ರ ಹರಡುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ. ವೈದ್ಯಕೀಯ ತಜ್ಞರ ಪ್ರಕಾರ, ಹ್ಯಾಂಟವೈರಸ್ ಹೊಸ ವೈರಸ್ ಅಲ್ಲ. ಇದು ಹಲವು ವರ್ಷಗಳಿಂದ ಜಗತ್ತಿನಲ್ಲಿದೆ. ಈ ವೈರಸ್ ಹೇಗೆ ಹರಡುತ್ತದೆ ಮತ್ತು ಅದನ್ನು ಹೇಗೆ ತಡೆಯುವುದು ಎಂಬುದರ ಕುರಿತು ವೈದ್ಯಕೀಯ ಕ್ಷೇತ್ರವು ಈಗಾಗಲೇ ಸ್ಪಷ್ಟ ತಿಳುವಳಿಕೆಯನ್ನು ಹೊಂದಿದೆ.
ಈ 12 ರಾಷ್ಟ್ರಕ್ಕೆ WHO ಎಚ್ಚರಿಕೆ
ಕೆನಡಾ, ಡೆನ್ಮಾರ್ಕ್, ಜರ್ಮನಿ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಸೇಂಟ್ ಕಿಟ್ಸ್ ಮತ್ತು ನೆವಿಸ್, ಸಿಂಗಾಪುರ, ಸ್ವೀಡನ್, ಸ್ವಿಟ್ಜರ್ಲೆಂಡ್, ಟರ್ಕಿ ಮತ್ತು ಯುನೈಟೆಡ್ ಕಿಂಗ್ಡಮ್ ದೇಶಗಳಿಗೆ ಎಚ್ಚರಿಕೆ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಇಲ್ಲಿ ಜನರು ಭಯಭೀತರಾಗುವ ಅಗತ್ಯವಿಲ್ಲ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಜ್ಞರು ಸೂಚಿಸಿದ್ದಾರೆ. ಮನೆಯ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡುವುದು, ಇಲಿಗಳು ಮನೆಗೆ ಪ್ರವೇಶಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಮತ್ತು ಗೋದಾಮುಗಳು ಅಥವಾ ಧೂಳಿನ ಪ್ರದೇಶಗಳಲ್ಲಿ ಕೆಲಸ ಮಾಡುವಾಗ ಮಾಸ್ಕ್ ಮುಂತಾದ ಸರಳ ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ ಸಾಕು ಎನ್ನುತ್ತಾರೆ,






