ಜನಮನ

ಪ್ರೀತಿಸಿ ನಾಟಕವಾಡಿದ್ದ ಪ್ರಿಯಕರನ ಕಿರುಕುಳಕ್ಕೆ ನೊಂದು ‘ಮಿಸ್ ಆಂಧ್ರ’ ಯುವತಿ ಆತ್ಮಹತ್ಯೆ

Views: 0

ಪ್ರಿಯಕರ ಪ್ರೀತಿಸಿ ನಾಟಕವಾಡಿದ ಕಾರಣಕ್ಕೆ ನೊಂದ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ ತರಬೇತುದಾರನನ್ನು ಪೊಲೀಸರು ಬಂಧಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಯುವತಿ ವಿದ್ಯಾಶ್ರೀ(25) ಬಂಧಿತ ಆರೋಪಿ ಅಕ್ಷಯ್ ( 27)

ವಿದ್ಯಾಶ್ರೀಯು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ‘ಮಿಸ್ ಆಂಧ್ರ’ ಕಿರೀಟ ಪಡೆದಿದ್ದ ಈಕೆ ಕೆಂಪಾಪುರದಲ್ಲಿ ತಾಯಿ ಜೊತೆ ವಾಸವಾಗಿದ್ದಳು.

ಆರೋಪಿ ಅಕ್ಷಯ್ ಮಂಡ್ಯದ ಮೂಲದವನಾಗಿದ್ದು, ನಗರದಲ್ಲಿ ಪೋಷಕರೊಂದಿಗೆ ವಾಸವಾಗಿದ್ದನು.

ಬಸವೇಶ್ವರ ಜಿಮ್ ಕ್ಲಾಸ್ ನಲ್ಲಿ ತರಬೇತುದಾರನಾಗಿದ್ದು ಕೆಲಸ ಮಾಡುತ್ತಿದ್ದನು. ಇವರಿಬ್ಬರ ಮಧ್ಯೆ ಪ್ರೀತಿ ಆರಂಭವಾಗಿ ಅನೇಕ ಬಾರಿ ಭೇಟಿಯಾಗಿದ್ದರು. ಮದುವೆಯಾಗುತ್ತೇನೆ ಎಂದು ಆಕೆಯನ್ನು ನಂಬಿಸಿ ನಾಟಕವಾಡಿದ ವಿದ್ಯಾಶ್ರೀಯಿಂದ 1.76 ಲಕ್ಷ ರೂಪಾಯಿ ಸಾಲ ಪಡೆದಿದ್ದ ,ಸಾಲ ವಾಪಸ್ ಕೇಳಿದ್ದಕ್ಕೆ ಕಿರುಕುಳ ನೀಡುತ್ತಿದ್ದನು. ತಮ್ಮಿಬ್ಬರ ಖಾಸಗಿ ಫೋಟೋಗಳನ್ನು ಜಾಲತಾಣದಲ್ಲಿ ಹರಿದು ಬಿಡುವುದಾಗಿ ಬೆದರಿಕೆ ಹಾಕಿದ್ದ. ನೊಂದ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Related Articles

Back to top button
error: Content is protected !!