ಇತರೆ

ಕುಂದಾಪುರ: ಶಾಸ್ತ್ರೀ ಪಾರ್ಕ್‌ ಫ್ಲೈಒವರ್‌ ಸಮೀಪ ಬೈಕ್ ಡಿವೈಡರ್ ಗೆ ಢಿಕ್ಕಿ, ಯುವಕ ಸಾವು  

Views: 1375

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಶಾಸ್ತ್ರೀ ಪಾರ್ಕ್‌ ಫ್ಲೈಒವರ್‌ ಸಮೀಪ ಬೈಕ್ ರಸ್ತೆಯ ಬದಿ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ನಡೆದಿದೆ.

ಅರುಣ್ (17) ಮೃತಪಟ್ಟ ಯುವಕ, ರಾಷ್ಟ್ರೀಯ ಹೆದ್ದಾರಿ 66 ನೇ ಉಡುಪಿ- ಬೈಂದೂರು ಏಕಮುಕ ರಸ್ತೆಯಲ್ಲಿ ಮೋಟಾರ್‌ ಸೈಕಲ್‌ ಚಾಲಕ ಅರುಣ್ ಎಂಬಾತನು ಅತೀ ವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕುಂದಾಪುರ ಶಾಸ್ತ್ರೀ ಪಾರ್ಕ್‌ ಫ್ಲೈಒವರ್‌ ಕೊನೆಗೊಳ್ಳುವಲ್ಲಿ ತಲುಪುವಾಗ ಮೋಟಾರ್‌ ಸೈಕಲ್‌ ನಿಯಂತ್ರಣ ತಪ್ಪಿ ರಸ್ತೆಯ ಬದಿ ಡಿವೈಡರ್ ಗೆ ಹಾಗೂ ಕಬ್ಬಿಣದ ಗ್ರಿಲ್ಸ್ ಗಳಿಗೆ ಡಿಕ್ಕಿ ಹೊಡೆದು ಮೋಟರ್‌ ಸೈಕಲ್‌ ಸವಾರ ಮೋಟಾರ್‌ ಸೈಕಲ್ ನೊಂದಿಗೆ ಸ್ಕಿಡ್‌ ಆಗಿ ಬಿದ್ದಿದ್ದು ಪರಿಣಾಮ ತಲೆಗೆ ಹಾಗೂ ಕೈಕಾಲುಗಳಿಗೆ ಗಂಭೀರ ಗಾಯವಾಗಿದ್ದು, ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ.

ನಂತರ ಆಸ್ಪತ್ರೆಗೆ ಬಂದ ಪಿರ್ಯಾದಿದಾರರಾದ ಕೌಶಿಕ್ ಇವರು‌ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿಯ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ದೃಢಪಡಿಸಿರುತ್ತಾರೆ.

Related Articles

Back to top button
error: Content is protected !!