ಇತರೆ

ಹುಬ್ಬಳ್ಳಿ ಬಳಿಕ ಕೊಪ್ಪಳದಲ್ಲಿ ನಡೀತಾ ಲವ್ ಜಿಹಾದ್?

Views: 40

ಕನ್ನಡ ಕರಾವಳಿ ಸುದ್ದಿ: ಹುಬ್ಬಳ್ಳಿ ಬಳಿಕ ಕೊಪ್ಪಳದಲ್ಲೊಂದು ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಮುಸ್ಲಿಂ ಯುವಕನ ಮೊಬೈಲ್‌ನಲ್ಲಿ ಹಿಂದೂ ಯುವತಿಯರ ರಾಶಿ ರಾಶಿ ಫೋಟೊ ಹಾಗೂ ವಿಡಿಯೊಗಳು ಪತ್ತೆಯಾಗಿವೆ.

ಕೊಪ್ಪಳ ತಾಲೂಕಿನ ಕಂಪ್ಲಿ ಗ್ರಾಮದ ಮುಸ್ತಫಾ ವಿರುದ್ದ ಲವ್‌ ಜಿಹಾದ್‌ ಆರೋಪ ಕೇಳಿಬಂದಿದೆ. ನರ್ಸಿಂಗ್‌ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಪುಸಲಾಯಿಸಿ, ಹಲವೆಡೆ ಸುತ್ತಾಡಿದ್ದಾನೆ. ಸದ್ಯ ಇದೇ ವಿದ್ಯಾರ್ಥಿನಿ ಲವ್ ಜಿಹಾದ್‌ಗೆ ಒಳಗಾಗಿದ್ದಾಳೆ ಎನ್ನಲಾಗಿದೆ.

ಕಳೆದ ಮೂರು ದಿನಗಳ ಹಿಂದೆ ಇವರಿಬ್ಬರು ಜಿಲ್ಲಾಸ್ಪತ್ರೆ ಬಳಿ ಇದ್ದಾಗ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಮುಸ್ತಫಾ ಮೊಬೈಲ್ ಪರಿಶೀ ಲಿಸಿದಾಗ ಹತ್ತಾರು ಹಿಂದೂ ಯುವತಿಯರ ಜತೆಗೆ ಇರುವ ವಿಡಿಯೊಗಳು ಪತ್ತೆಯಾಗಿವೆ. ಇವುಗಳಲ್ಲಿ ಹಿಂದೂ ಯುವತಿಯರಿಗೆ ಬೀಯರ್ ಕುಡಿಸಿ, ಮಾಂಸ ಸೇವನೆ ಮಾಡಿಸಿದ್ದು, ಅರೆನಗ್ನಾವಸ್ಥೆಯಲ್ಲಿ ಇರುವ ವಿಡಿಯೋಗಳು ಪತ್ತೆಯಾಗಿವೆ. ಜತೆಗೆ ಗಾಂಜಾ, ಹುಕ್ಕಾ ಸಹ ಹೊಡೆಯುವ ವಿಡಿಯೊಗಳು ಸಹ ಪತ್ತೆಯಾಗಿವೆ. ಇನ್ನು ಮುಸ್ತಫಾ ಮಟ್ಕಾ ಬುಕ್ಕಿ ಯಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಹಿಂದೂ ಜಾಗರಣಾ ವೇದಿಕೆ ಹಾಗೂ ವಿಶ್ವ ಹಿಂದೂ ಪರಿಷತ್‌ನ ಮುಖಂಡರು, ಕಾರ್ಯಕರ್ತರು ಎಸ್ಪಿ ಡಾ.ರಾಮ್ ಅರಸಿದ್ದಿಯವರನ್ನು ಭೇಟಿಯಾಗಿ ಮುಸ್ತಾಫಾ ಬಗ್ಗೆ ತಿಳಿಸಿದ್ದಾರೆ.

Related Articles

Back to top button
error: Content is protected !!