ಮೊನಾಲಿಸಾಗೆ ಬರೀ 16 ವರ್ಷ, ಪತಿ ವಿರುದ್ಧ ಪೋಕೋ ಪ್ರಕರಣ!
Views: 38
ಕನ್ನಡ ಕರಾವಳಿ ಸುದ್ದಿ: ಕಳೆದ ವರ್ಷ ಉತ್ತರಪ್ರದೇಶದಲ್ಲಿ ನಡೆದಿದ್ದ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರಿ, ನೀಲಿಗಣ್ಣಿನ ಸುಂದರಿ ಎಂದೇ ಜನಪ್ರಿಯರಾಗಿರುವ ಮೊನಾಲಿಸಾ ಇನ್ನೊಂದು ಅಪಾಯಕ್ಕೆ ಸಿಲುಕಿದ್ದಾರೆ.
ಮಾ.11ರಂದು ಅವರು ಕೇರಳದಲ್ಲಿ ಹಿಂದೂ ಸಂಪ್ರದಾಯದಂತೆ ಮುಸ್ಲಿಮ್ ಯುವಕ ಫರ್ಮಾನ್ ನನ್ನು ವರಿಸಿದ್ದರು. ಆ ವೇಳೆ ತಾನು ಪ್ರಾಪ್ತ ವಯಸ್ಕೆ ಎಂದೇ ಹೇಳಿಕೊಂಡಿದ್ದರು. ಇದೀಗ ಆಕೆ ಅಪ್ರಾಪ್ತ ವಯಸ್ಕಳು ಎಂದು ಪ್ರಮಾಣಪತ್ರ ಸಲ್ಲಿಕೆ ಮಾಡಲಾಗಿದ್ದು, ಪತಿಯ ವಿರುದ್ಧ ಪೋಕೋ ಕಾಯ್ದೆಯಡಿ ಮಧ್ಯಪ್ರದೇಶದ ಖಾರ್ಗೋನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಷ್ಟು ಮಾತ್ರವಲ್ಲ ಎಸ್‌ಸಿಎಸ್‌ಟಿ ದೌರ್ಜನ್ಯ ನಿಗ್ರಹ ಕಾಯ್ದೆಯಡಿ ದೌರ್ಜನ್ಯ ಪ್ರಕರಣವೂ ದಾಖಲಾಗಿದೆ. ಆಸ್ಪತ್ರೆಯಲ್ಲಿ ಜನನವಾದ ಮಾಹಿತಿ ಪ್ರಕಾರ, ಬುಡಕಟ್ಟು ಪಂಗಡಗಳ ರಾಷ್ಟ್ರೀಯ ಆಯೋಗ ಮೊನಾಲಿಸಾ ಜನನ ದಿನಾಂಕವನ್ನು 2009, ಡಿ.30 ಎಂದು ಖಚಿತಪಡಿಸಿಕೊಂಡಿದೆ. ಅಲ್ಲಿಗೆ ಮದುವೆ ವೇಳೆಗೆ ಆಕೆಯ ವಯಸ್ಸು 16 ವರ್ಷ 2 ತಿಂಗಳು. ಹೀಗಾಗಿ ಈ ಮದುವೆ ಅಕ್ರಮ ಎಂದು ದೂರು ಸಲ್ಲಿಸಲಾಗಿದೆ. ಮೊನಾಲಿಸಾ ಪರ್ದಿ ಬುಡಕಟ್ಟಿಗೆ ಸೇರಿದ್ದಾರೆ. ಮಲಯಾಳಂ ಚಲನಚಿತ್ರದಲ್ಲೂ ನಟಿಸುತ್ತಿರುವ ಆಕೆ ಕೇರಳದಲ್ಲಿ ಅಲ್ಲಿನ ಗಣ್ಯಾತಿಗಣ್ಯ ರಾಜಕಾರಣಿಗಳ ಸಮ್ಮುಖದಲ್ಲಿ ವಿವಾಹವಾಗಿದ್ದರು.






