ಸಾಂಸ್ಕೃತಿಕ

ಉಡುಪಿ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ, ಗಾಯಕ ಡಾ. ಗಣೇಶ್ ಗಂಗೊಳ್ಳಿ ನಿಧನ 

Views: 1207

ಕನ್ನಡ ಕರಾವಳಿ ಸುದ್ದಿ: ಉಡುಪಿ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ, ಗಾಯಕ,ಆಕಾಶವಾಣಿ ಕಲಾವಿದ ಡಾ.ಗಣೇಶ್ ಗಂಗೊಳ್ಳಿ(64) ಎಪ್ರಿಲ್ 7ರಂದು ಸಾಲಿಗ್ರಾಮ ದಲ್ಲಿ ನಿಧನರಾದರು.

ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. 

ಇಂದು ಬೆಳಿಗ್ಗೆ ಮನೆಯಿಂದ ಉಡುಪಿಗೆ ಸ್ಕೂಟರ್ ನಲ್ಲಿ ಹೋಗುವಾಗ ಸಾಲಿಗ್ರಾಮದಲ್ಲಿ ಬ್ರೈನ್ ಸ್ಟ್ರೋಕ್ ಗೆ ಒಳಗಾಗಿ ತೀವ್ರ ಅಸ್ವಸ್ಥಗೊಂಡ ಅವರನ್ನು ಕೂಡಲೇ ಉಡುಪಿ ಹೈಟೆಕ್ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ 11:45ಕ್ಕೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. 

ಖ್ಯಾತ ಗಾಯಕರಾದ ಅವರು ಆರಂಭದಲ್ಲಿ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಿದ್ದರು.  ಆಕಾಶವಾಣಿ ಕಲಾವಿದರಾದ ಅವರು ಹಲವಾರು ಸಾಹಿತ್ಯ ಸಮ್ಮೇಳನದಲ್ಲಿ ಕುಂದಗನ್ನಡದ ಹಾಡನ್ನು ಹಾಡಿ ರಂಜಿಸುತ್ತಿದ್ದರು.

ಇವರಿಗೆ ಕರ್ನಾಟಕ ಯುವರತ್ನ ಪ್ರಶಸ್ತಿ, ಜೀಶಂಪ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ, ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ , ಬೇಂದ್ರೆ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿ ಇವರ ಸಾಧನೆಗೆ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಖ್ಯಾತ ಕಲಾವಿದನ ನಿಧನಕ್ಕೆ ಗಣ್ಯರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.ಸಾಹಿತ್ಯ,ಕಲಾ ಕ್ಷೇತ್ರಕ್ಕೆ ಇವರ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದೆ.

Related Articles

Back to top button
error: Content is protected !!