ಇತರೆ
ಹೆಲೈಟ್ ಧರಿಸದೇ, ಬಾಟಲ್ ಹಿಡಿದು ಜಾಲಿ ಮೂಡ್‌ನಲ್ಲಿ ಬೈಕ್‌ನಲ್ಲಿ ಕುಳಿತು ಯುವತಿ ಹುಚ್ಚಾಟ
Views: 72
ಕನ್ನಡ ಕರಾವಳಿ ಸುದ್ದಿ: ಹೆಲೈಟ್ ಧರಿಸದೇ, ಬಾಟಲ್ ಹಿಡಿದು ಜಾಲಿ ಮೂಡ್‌ನಲ್ಲಿ ಬೈಕ್‌ನಲ್ಲಿ ಯುವತಿಯ ಹುಚ್ಚಾಟ ಮೆರೆದಿರುವ ಘಟನೆ ಬನಶಂಕರಿಯಲ್ಲಿ ನಡೆದಿದೆ.
ಬನಶಂಕರಿ ಕಡೆಯಿಂದ ಬಿಟಿಎಂ ಕಡೆ ಯುವತಿ ಬೈಕ್‌ನಲ್ಲಿ ಹೊರಟಿದ್ದಳು. ಈ ವೇಳೆ ಹಿಂಬದಿಯಲ್ಲಿ ಕುಳಿತು ಸಿನಿಮೀಯ ಶೈಲಿಯಲ್ಲಿ ಎಂಜಾಯ್ ಮಾಡಿದ್ದಾಳೆ. ಹೆಲೆಟ್ ಧರಿಸದೇ ಕೈಯಲ್ಲಿ ಬಾಟಲಿ ತೇಲಾಡಿಕೊಂಡು ಒಂದನ್ನು ಹಿಡಿದು ಜಾಲಿ ಮೂಡ್‌ನಲ್ಲಿ ತೇಲಾಡಿದ್ದಾಳೆ. ಸುಮಾರು ನಾಲೈದು ಕಿ.ಮೀ ಇದೇ ರೀತಿ ಮಾಡಿದ್ದು, ಕುಡಿದಂತೆ ಬೈಕ್‌ನಲ್ಲಿ ತೂರಾಡಿಕೊಂಡು ಹೋಗಿದ್ದಾಳೆ. ಹಿಂದೆ ಕಾರಿನಲ್ಲಿ ಬರುತ್ತಿದ್ದ ಯುವಕರ ಗುಂಪೊಂದು ಯುವತಿ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.






