ಪ್ರೇಮ ವೈಫಲ್ಯದಿಂದ ಬಸ್ಗೆ ಬೈಕ್ ಡಿಕ್ಕಿ ಹೊಡೆಸಿ ಸಜೀವ ದಹನವಾದ ಯುವಕ
Views: 124
ಕನ್ನಡ ಕರಾವಳಿ ಸುದ್ದಿ: ಲವ್ ಮಾಡಿದ ಹುಡಗಿ ಸಿಗಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ಇನ್ಸ್ಟಾಗ್ರಾಂನಲ್ಲಿ ಪೊಸ್ಟ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೈಕ್ ಅನ್ನು ಸರಕಾರಿ ಬಸ್ಗೆ ರಭಸವಾಗಿ ಡಿಕ್ಕಿ ಹೊಡೆದು ಜೀವಂತ ಸಜೀವ ದಹನ ಆದ ಹೃದಯ ವಿದ್ರಾವಕ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದ ಬಳಿ ಕೆಎಸ್ಆರ್ಟಿಸಿ ಬಸ್ ಮತ್ತು ಎನ್ ಫಿಲ್ಡ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೀಕರ್ ರಸ್ತೆ ಅಪಘಾತ ಸಂಭವಿಸಿತ್ತು. ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಬಸ್ ಹೊತ್ತಿ ಉರಿದಿದೆ. ಬಸ್ನಲ್ಲಿ ಇದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೈಕ್ ಸವಾರ ಮಾತ್ರ ಸಜೀವ ದಹನವಾಗಿದ್ದಾನೆ. ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಲು ಹರ ಸಾಹಸ ಪಡಬೇಕಾಯಿತು.

ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಹೇಗೆ : ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ ಆತ್ಮಹತ್ಯೆ ಮಾಡಿಕೊಳ್ಳೊದಾಗಿ ವಿಡಿಯೊ ಪೋಸ್ಟ್ ಹಾಕಿದ್ದ. ಅಂದ ಹಾಗೆ ದೇವರ ಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದ ಅಭಿಷೇಕ ನಾಗರಾಳ ಎಂಬುವನೇ ದುರಂತ ಅಂತ್ಯ ಕಂಡ ಯುವಕನಾಗಿದ್ದಾನೆ.
ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಏನಿದೆ?: ಅವಳು ನನಗೆ ಬೇಕು, ಅವಳನ್ನು ದೂರು ಮಾಡಿದವರೆ ನನ್ನ ಸಾವಿಗೆ ಆ ಮೂವರು ಕಾರಣ ಎಂದು ಈತ ಸಾಯುವ ಮುನ್ನ ಅಭಿಷೇಕ್ ಇನ್ಸ್ಟಾಗ್ರಾಂ ಪೋಸ್ಟ್ ಹಾಕಿಕೊಂಡಿದ್ದ. ಮಧ್ಯಾಹ್ನದ ಹೊತ್ತಿಗೆ ಸಾಯುತ್ತೇನೆ ಎಂದು ವಿಡಿಯೋ ಪೋಸ್ಟ್ ಮಾಡಿದ್ದ ಈತ, ವೀರೇಶ್ ನಂದೂರ್, ತಾಯಿ ಚೈತ್ರಾ ನಂದೂರ್, ಕೂಡಲಸಂಗಮದಲ್ಲಿರೋ ಅವರ ಸಂಬಂಧಿ ನವೀನ್ಕುಮಾರ್ ಪಾಟೀಲ್ ನನ್ನ ಸಾವಿಗೆ ಕಾರಣ ಎಂದು ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾನೆ. ರಾಯಲ್ ಎನ್ ಪಿಲ್ಡ್ ಬೈಕ್ನಲ್ಲಿ ಸಿಂದಗಿ ಕಡೆ ಹೊರಟು ಬಸ್ಗೆ ಡಿಕ್ಕಿ ಹೊಡೆದಿದ್ದಾನೆ.
ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.






