ಇತರೆ
ಕುಂದಾಪುರ: ಅಂಗಡಿಗೆ ಹೋಗಿ ಬರುತ್ತೇನೆಂದು ಹೋದ ಹಕ್ಲಾಡಿ ವ್ಯಕ್ತಿ ನಾಪತ್ತೆ
Views: 62
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ ನಿವಾಸಿಯೊಬ್ಬರು ಕಳೆದ ಕೆಲವು ದಿನಗಳಿಂದ ಕಾಣೆಯಾಗಿರುವ ಘಟನೆ ಗಂಗೊಳ್ಳಿಯಲ್ಲಿ ವರದಿಯಾಗಿದೆ.
ಹಕ್ಲಾಡಿ ಗ್ರಾಮದ ನಿವಾಸಿ ಶ್ರೀಧರ ಚಂದನ್ ಅವರ ಪುತ್ರ ರವೀಂದ್ರ (41) ನಾಪತ್ತೆಯಾದವರು.
ಮಂಗಳೂರಿನಲ್ಲಿ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಮಾರ್ಚ್ 20ರಂದು ಮನೆಗೆ ಬಂದಿದ್ದ ರವೀಂದ್ರ ಅವರು ಮಾರ್ಚ್ 25ರಂದು ಬೆಳಿಗ್ಗೆ ಸುಮಾರು 6.30ಕ್ಕೆ “ಅಂಗಡಿಗೆ ಹೋಗಿ ಬರುತ್ತೇನೆ” ಎಂದು ಮನೆಯವರಿಗೆ ತಿಳಿಸಿ ತಮ್ಮ ಮೋಟಾರ್ ಸೈಕಲ್‌ನಲ್ಲಿ ತೆರಳಿದ್ದರು.
ಆದರೆ ಬಳಿಕ ಮನೆಗೆ ವಾಪಸ್ ಆಗದೆ ಹಾಗೂ ಸಂಬಂಧಿಕರ ಮನೆಗಳಿಗೂ ಹೋಗದೇ ಕಾಣೆಯಾಗಿದ್ದಾರೆ.
ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಯಾರಿಗಾದರೂ ರವೀಂದ್ರ ಅವರ ಬಗ್ಗೆ ಮಾಹಿತಿ ದೊರೆತಲ್ಲಿ ಸಮೀಪದ ಪೊಲೀಸ್ ಠಾಣೆಗೆ ತಿಳಿಸುವಂತೆ ಮನವಿ ಮಾಡಲಾಗಿದೆ.






