ಇತರೆ

ಕೋಟ ಕಲ್ಮಾಡಿ: ಆರ್ಥಿಕ ಸಾಕ್ಷರತಾ ಮಾಹಿತಿ ಕಾರ್ಯಾಗಾರ 

Views: 12

ಕನ್ನಡ ಕರಾವಳಿ ಸುದ್ದಿ: ಟಿ.ಎಂ ಜಿ ಸುನಿಧಿ ಫೌಂಡೇಶನ್ ಟ್ರಸ್ಟ್ ಮಣಿಪಾಲ ಪ್ರಾಯೋಜಕತ್ವದಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಕೋಟ ಗ್ರಾಮ ಪಂಚಾಯತ್ , ಅಂಗನವಾಡಿ ಕೋಟ ಕಲ್ಮಾಡಿ,ಕಾರಂತ ಥೀಮ್ ಪಾರ್ಕ್ ಇವರ ಮಾರ್ಗದರ್ಶನದಲ್ಲಿ ಉಡುಪಿ ತಾಲೂಕಿನ ಕೋಟ ಕಾರಂತ ಥೀಮ್ ಪಾರ್ಕ್ ಸಭಾಂಗಣದಲ್ಲಿ ಬ್ಯಾಂಕಿಂಗ್ ಮಾಹಿತಿ, ಸೌರಶಕ್ತಿ,ಜೀವನ ಕೌಶಲ್ಯಗಳ ಬಗ್ಗೆ ಕಾರ್ಯಾಗಾರ ನಡೆಯಿತು.

ಉದ್ಘಾಟಕರಾಗಿ ಕೋಟ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುಮತಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೋಟ ಕಾರಂತ ಥೀಮ್ ಪಾರ್ಕ್ ನ ಅಧ್ಯಕ್ಷರಾದ ಶ್ರೀ ಸುಬ್ರಾಯ ಆಚಾರ್ಯ, ಬಿವಿಟಿ ಮಣಿಪಾಲದ ರಾಘವೇಂದ್ರ ಆಚಾರ್ಯ ಕೆದೂರು, ಆರ್ಥಿಕ ಸಾಕ್ಷರತಾ ಕೇಂದ್ರದ ವಾಣಿ, ಕೋಟ ವಲಯ ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ, ಉಪಸ್ಥಿತರಿದ್ದು ಶುಭ ಹಾರೈಸಿದರು. ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ಸ್ವಾಗತಿಸಿ, ವಂದಿಸಿದರು. ಕೋಟ ಕಲ್ಮಾಡಿ ಅಂಗನವಾಡಿ ಶಿಕ್ಷಕಿ ಜಯಲಕ್ಷ್ಮಿ ನಿರೂಪಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಿಷನ್ ಸಂಯೋಜಕಿ ಶಾರದ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಒಟ್ಟು 40 ಜನ ಫಲಾನುಭವಿಗಳು ಮಾಹಿತಿ ಪಡೆದರು.

Related Articles

Back to top button
error: Content is protected !!