ಇತರೆ

ಪೆಟ್ರೋಲ್ ರೇಟ್ ಲೀಟರ್‌ಗೆ 5 ರೂಪಾಯಿ ಏರಿಕೆ ಇಂದಿನಿಂದಲೇ ಪರಿಷ್ಕೃತ ದರ ಜಾರಿ

Views: 262

ಕನ್ನಡ ಕರಾವಳಿ ಸುದ್ದಿ: ಖಾಸಗಿ ಇಂಧನ ಕಂಪನಿಯಾದ ‘ನಯಾರಾ’  ತನ್ನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏಕಾಏಕಿ ಏರಿಕೆ ಮಾಡಿದೆ.

ನಯಾರಾ ಪೆಟ್ರೋಲ್ ಬಂಕ್‌ಗಳಲ್ಲಿ ಇಂದು ಬೆಳಿಗ್ಗೆಯಿಂದಲೇ ಜಾರಿಗೆ ಬರುವಂತೆ ಇಂಧನ ದರದಲ್ಲಿ ಭಾರೀ ಏರಿಕೆ ಮಾಡಲಾಗಿದೆ. ವಿಶೇಷವಾಗಿ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 5 ರೂಪಾಯಿ ಹಾಗೂ ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಮಾಡಲಾಗಿದೆ.

ಪೆಟ್ರೋಲ್ ನಿನ್ನೆ ಲೀಟರ್‌ಗೆ 103.16 ರೂಪಾಯಿ ಇದ್ದರೆ ಇವತ್ತು 108.16 ಆಗುವ ಮೂಲಕ 5 ರೂಪಾಯಿ ಏರಿಸಿದ್ದಾರೆ. ಇನ್ನು ಡಿಸೇಲ್ ನಿನ್ನೆ ಲೀಟರ್‌ಗೆ 90.99 ರೂಪಾಯಿ ಇತ್ತು, ಇಂದು ಮೂರು ರೂಪಾಯಿ ಏರಿಕೆ ಕಂಡು 93.99 ರೂಪಾಯಿ ಆಗಿದೆ.

ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಬಂಕ್‌ಗಳಿಗೆ ಹೋಲಿಸಿದರೆ ನಯಾರಾ ಬಂಕ್‌ಗಳಲ್ಲಿ ಈ ದರ ವ್ಯತ್ಯಾಸ ಎದ್ದು ಕಾಣುತ್ತಿದೆ. ಬೆಳಿಗ್ಗೆ ವಾಹನಗಳಿಗೆ ಇಂಧನ ತುಂಬಿಸಲು ಹೋದ ಗ್ರಾಹಕರು ಈ ಏಕಾಏಕಿ ಏರಿಕೆಯನ್ನು ಕಂಡು ಕಂಗಾಲಾಗಿದ್ದಾರೆ. ಈಗಾಗಲೇ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಕಷ್ಟಪಡುತ್ತಿರುವ ಜನರಿಗೆ, ಇಂಧನ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸದ್ಯಕ್ಕೆ ಈ ದರ ಏರಿಕೆ ಕೇವಲ ನಯಾರಾ ಬಂಕ್‌ಗಳಿಗೆ ಮಾತ್ರ ಸೀಮಿತವಾಗಿದೆಯೇ ಅಥವಾ ಇತರ ಕಂಪನಿಗಳೂ ದರ ಹೆಚ್ಚಿಸಲಿವೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.

Related Articles

Back to top button
error: Content is protected !!