ಇತರೆ

ಟಿಪ್ಪರ್ ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಖಾಸಗಿ ಬಸ್ :12 ಪ್ರಯಾಣಿಕರು ಸಜೀವ ದಹನ

Views: 62

ಆಂಧ್ರಪ್ರದೇಶ ಜಿಲ್ಲೆಯ ರಾಯವರಂ ಸಮೀಪ ಟಿಪ್ಪರ್ ಲಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಭೀಕರ ಬೆಂಕಿ ಅವಘಡ ಸಂಭವಿಸಿದೆ.ಈ ದುರ್ಘಟನೆಯಲ್ಲಿ 12 ಮಂದಿ ಸಜೀವ ದಹನವಾಗಿದ್ದು, 15ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೈದರಾಬಾದ್‌ನಿಂದ ಪಾಮೂರು ಕಡೆಗೆ ತೆರಳುತ್ತಿದ್ದ ‘ಹರೇ ಕೃಷ್ಣ ಟ್ರಾವೆಲ್ಸ್’ಗೆ ಸೇರಿದ ಖಾಸಗಿ ಬಸ್, ಸ್ಟೇಟ್ ಕ್ವಾರಿ ಬಳಿ ಟಿಪ್ಪ‌ರ್ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಬಸ್‌ನಲ್ಲಿ ತಕ್ಷಣವೇ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಅಪಘಾತದ ಸಮಯದಲ್ಲಿ ಬಸ್‌ನಲ್ಲಿ ಸುಮಾರು 30 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದೆ. ಬೆಂಕಿ ಆವರಿಸಿದ ಕೂಡಲೇ 10 ಮಂದಿ ಪ್ರಯಾಣಿಕರು ಹೇಗೋ ಹೊರಬಂದು ಜೀವ ಉಳಿಸಿಕೊಂಡಿದ್ದಾರೆ.

ಮೃತಪಟ್ಟವರು ಕನಿಗಿರಿ ಮತ್ತು ಪಾಮೂರು ನಿವಾಸಿಗಳು ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ತಕ್ಷಣವೇ ಮಾರ್ಕಾಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Related Articles

Back to top button
error: Content is protected !!