ಇತರೆ

ಕುಂದಾಪುರ: ಹೆಂಗವಳ್ಳಿ ಸರ್ಕಾರಿ ಹಾಡಿಯಲ್ಲಿ ಮಹಿಳೆಯಿಂದ ಅಕ್ರಮ ಮದ್ಯ ಮಾರಾಟ, ಪೊಲೀಸರ ದಾಳಿ 

Views: 227

ಕನ್ನಡ ಕರಾವಳಿ ಸುದ್ದಿ:ಹೆಂಗವಳ್ಳಿ ಸರ್ಕಾರಿ ಹಾಡಿಯಲ್ಲಿ ಮಹಿಳೆಯಿಂದ ಅಕ್ರಮ ಮದ್ಯ ಮಾರಾಟ ವೇಳೆ ಪೊಲೀಸರಿಂದ ದಾಳಿ ನಡೆದಿದೆ.

ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಹೆಂಗವಳ್ಳಿ ಗ್ರಾಮದ ತೊಂಬತ್ತು ಶಾಲಿಗುಡ್ಡೆ ಎಂಬಲ್ಲಿ ಸರ್ಕಾರಿ ಹಾಡಿಯಲ್ಲಿ ಓರ್ವ ಮಹಿಳೆ ಅಕ್ರಮವಾಗಿ ಪರವಾನಿಗೆ ಇಲ್ಲದೇ ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಂತೆ ಹೋಗಿ ನೋಡಲಾಗಿ ಓರ್ವ ಮಹಿಳೆಯು ಒಂದು ರಟ್ಟಿನ ಬಾಕ್ಸನ್ನು ಇಟ್ಟುಕೊಂಡು ಗಿರಾಕಿಗಳಿಗೆ ಕಾಯುತ್ತಿರುವುದು ಕಂಡು ಬಂದಿದ್ದು ದಾಳಿಮಾಡಿದ್ದು ಆ ಮಹಿಳೆಯ ಬಳಿ ಒಂದು ರಟ್ಟಿನ ಬಾಕ್ಸ ಇದ್ದು ಅದನ್ನು ಪರಿಶೀಲಿಸಿದ್ದು ಬಾಕ್ಸ್ ನಲ್ಲಿ ಒರಿಜಿನಲ್ ಚಾಯ್ಸ್  ಎಂದು ಬರೆದಿರುವ 90 MLನ ಮದ್ಯ ತುಂಬಿದ ಟೆಟ್ರಾ ಪ್ಯಾಕೆಟ್ ಗಳಿದ್ದು, ಅವುಗಳನ್ನು ಎಣಿಸಿ ನೋಡಲಾಗಿ 41 ಟೆಟ್ರಾ ಪ್ಯಾಕೇಟ್ ಗಳಿದ್ದು, ಒಂದು ಟೆಟ್ರಾ ಪ್ಯಾಕ್ ಬೆಲೆ 50/-ರೂ ಆಗಿದ್ದು, 41 ಟೆಟ್ರಾ ಪ್ಯಾಕೇಟ್ ಬೆಲೆ 2050/- ಆಗಿರುತ್ತದೆ, 41 ಟೆಟ್ರಾ ಪ್ಯಾಕೇಟ್ ನ ಮಧ್ಯದ ಪ್ರಮಾಣ 3.69 ಲೀಟರ್ ಆಗಿರುತ್ತದೆ, ಮದ್ಯ ಮಾರಾಟ ಮಾಡುತ್ತಿದ್ದ ತೊಂಬತ್ತು, ಹೆಂಗವಳ್ಳಿ ಗ್ರಾಮ ರೇವತಿ ಶೆಡ್ತಿ (42)ಮದ್ಯ ಮಾರಾಟ ಮಾಡುವ ಬಗ್ಗೆ ಪರವಾನಿಗೆ ಇದೆಯೇ ಎಂಬುದಾಗಿ ಕೇಳಿದಲ್ಲಿ ತನ್ನ ಬಳಿ ಯಾವುದೇ ಪರವಾನಿಗೆ ದಾಖಲಾತಿ ಇರುವುದಿಲ್ಲವಾಗಿ ತಿಳಿಸಿದ್ದು ಮದ್ಯದ ಪ್ಯಾಕೇಟನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 20/2026 ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

Related Articles

Back to top button
error: Content is protected !!