ಇತರೆ
ಆತ್ರಾಡಿ ಮೂಡುಬೆಳ್ಳೆ ರಸ್ತೆಯಲ್ಲಿ ಬೈಕ್-ಟೆಂಪೋ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸಾವು
Views: 62
ಕನ್ನಡ ಕರಾವಳಿ ಸುದ್ದಿ: ಮಣಿಪಾಲದ ಆತ್ರಾಡಿಯ ಕಬ್ಯಾಡಿ ಅರ್ಮಾನ್ ರ್ಯಾಟ್ ಫ್ಯಾಕ್ಟರಿ ಸಮೀಪ ಸೋಮವಾರ ಬೆಳಿಗ್ಗೆ ಘಟನೆ ಸಂಭವಿಸಿದೆ. ಆತ್ರಾಡಿಯಿಂದ ಮೂಡುಬೆಳ್ಳೆ ಕಡೆಗೆ ಸಾಗುತ್ತಿದ್ದ 407 ಟೆಂಪೋ ಎದುರು ದಿಕ್ಕಿನಿಂದ ಬರುತ್ತಿದ್ದ ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಬೈಕ್ ಸವಾರ, ಹೆರ್ಗ ಗ್ರಾಮದ ನಿವಾಸಿ ಭಾಸ್ಕರ್ ನಾಯ್ಕ್ (70), ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೈಕ್‌ನ ಹಿಂಬದಿ ಸವಾರ ಗಂಭೀರ ಗಾಯಗೊಂಡಿದ್ದು, ತಕ್ಷಣ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ತಲುಪಿದ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ, ಅಪಘಾತ ಸಂಬಂಧಿಸಿದಂತೆ ಮುಂದಿನ ತನಿಖೆ ಆರಂಭಿಸಿದ್ದಾರೆ.






