ಜನಮನ

ಗಂಡನಿಲ್ಲದಾಗ ಬಾಡಿಗೆದಾರನ ಜೊತೆ ಸೊಸೆ ಲವ್ವಿ ಡವ್ವಿ: ವಿರೋಧಿಸಿದ ಅತ್ತಿಗೆಯನ್ನೇ ಫಿನಿಶ್

Views: 88

ಕನ್ನಡ ಕರಾವಳಿ ಸುದ್ದಿ: ಮನೇಲಿ ಗಂಡ ಇಲ್ಲದಾಗ ಸೊಸೆ ಹಾಗೂ ಬಾಡಿಗೆದಾರನ ನಡುವೆ ನಡೆಯುತ್ತಿದ್ದ ಲವ್ವಿ ಡವ್ವಿಯನ್ನು  ವಿರೋಧಿಸಿದ ಅತ್ತೆಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಲಕ್ಷ್ಮೀದ ನಿಶಾತ್‌ಗಂಜ್‌ನಲ್ಲಿ ನಡೆದಿದೆ.

ಲಕ್ಷ್ಮೀದ ನಿಶಾತ್‌ಗಂಜ್‌ನ ನಿವಾಸಿ, ನಿರ್ಮಲಾ ದೇವಿ(69) ಮೃತ ಅತ್ತೆ. ಸೊಸೆ ರಂಜನಾ ಮತ್ತು ಬಾಡಿಗೆದಾರ ರಾಜನ್ ಬಂಧಿತ ಆರೋಪಿಗಳು. ಮೃತ ನಿರ್ಮಲಾ ದೇವಿ ತಮ್ಮ ಮಗ ತ್ರಿದೇಶ್, ಸೊಸೆ ರಂಜನಾ ಹಾಗೂ ಮೂವರು ಮೊಮ್ಮಕ್ಕಳೊಂದಿಗೆ ಮನೆಯ ನೆಲ ಮಹಡಿಯಲ್ಲಿ ವಾಸವಿದ್ದರು.

ಮನೆ ಮೊದಲ ಮಹಡಿಯನ್ನು ಆರೋಪಿ ರಾಜನ್‌ಗೆ ಬಾಡಿಗೆಗೆ ಕೊಡಲಾಗಿತ್ತು. ಕಳೆದ ಮೂರು ವರ್ಷಗಳಿಂದ ಅಲ್ಲೇ ವಾಸವಾಗಿದ್ದ ಎಂದು ತಿಳಿದುಬಂದಿದೆ. ಬಾಡಿಗೆ ಬಂದ ಸ್ವಲ್ಪ ದಿನದ ಬಳಿಕ ಶುರುವಾದ ರಂಜನಾ ಮತ್ತು ರಾಜನ್ ನಡುವಿನ ಸಂಬಂಧದ ಬಗ್ಗೆ ರಂಜನಾ ಹಾಗೂ ತ್ರಿದೇಶ್ ನಡುವೆ ಜಗಳ ಆಗುತ್ತಿತ್ತು. ಕುಟುಂಬಸ್ಥರ ವಿರೋಧದ ಬಳಿಕವೂ ಇವರ ನಡುವಿನ ಸಂಬಂಧ ಮುಂದುವರೆದಿತ್ತು. ತ್ರೀದೇಶ್ ಮನೆಯಲ್ಲಿ ಇಲ್ಲದಾಗ ಆರೋಪಿಗಳು ಬೇಟಿಯಾಗುತ್ತಿರುವದನ್ನು ಅತ್ತೆ ನಿರ್ಮಲಾ ವಿರೋಧಿಸುತ್ತಿದ್ದರು.

ಇದರಿಂದ ಕೆರಳಿದ ಸೊಸೆ ಮತ್ತು ಆಕೆಯ ಪ್ರಿಯಕರ ಅತ್ತೆಯ ಕೊಲೆಗೆ ಸಂಚು ಹೂಡಿದ್ದು, ಶನಿವಾರ(ಮಾ.21) ಅತ್ತೆಯ ಕೈಗಳನ್ನು ಮೇಲಕ್ಕೆ ಕಟ್ಟಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಮೈಮೇಲಿದ್ದ ಒಡವೆಗಳನ್ನು ಕದ್ದು, ಬಚ್ಚಿಟ್ಟಿದ್ದಾರೆ. ಘಟನೆಯ ಬಳಿಕ ಸೊಸೆ ರಂಜನಾಳ ಮಗ ಆದಿತ್ಯ(14) ಕೊಲೆಯಾದ ಅಜ್ಜಿಯನ್ನು ಕಂಡ ಕೂಡಲೇ ತಂದೆಗೆ ಕರೆ ಮಾಡಿ ತಿಳಿಸಿದ್ದಾನೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆಯ ಕುರಿತು ತ್ರಿದೇಶ್ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸಿದಾಗ ಆರೋಪಿಗಳು ಸತ್ಯ ಬಾಯಿಬಿಟ್ಟಿದ್ದಾರೆ.

Related Articles

Back to top button
error: Content is protected !!