ಜನಮನ

ಚೀನಾಗೆ ತೆರಳುತ್ತಿದ್ದ ಟ್ಯಾಂಕರ್ ಭಾರತಕ್ಕೆ ಯೂಟರ್ನ್; ಮಂಗಳೂರಿಗೆ ಬರುತ್ತಿದೆ ರಷ್ಯಾ ತೈಲ 

Views: 50

ಕನ್ನಡ ಕರಾವಳಿ ಸುದ್ದಿ: ಭಾರತದ ಮನವಿಯನ್ನು ಮನ್ನಿಸಿರುವ ರಷ್ಯಾ ಚೀನಾದತ್ತ ಹೊರಟಿದ್ದ ತೈಲ ತುಂಬಿದ ಟ್ಯಾಂಕರನ್ನು ಭಾರತಕ್ಕೆ ಕಳುಹಿಸಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿದ್ದ ಹಡಗು ಈಗ ಯೂಟರ್ನ್ ಹೊಡೆದು ಮಂಗಳೂರಿನತ್ತ ಆಗಮಿಸಿದೆ.

ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ಜನವರಿ ಅಂತ್ಯದಲ್ಲಿ ಬಾಲ್ಟಿಕ್ ಸಮು ದ್ರದ ಬಂದರಿನಿಂದ ಯುರಲ್ಸ್ ಕಚ್ಚಾತೈಲವನ್ನು ಅಕ್ವಾ ಟೈಟಾನ್ ಹಡಗಿಗೆ ಲೋಡ್ ಮಾಡಲಾಗಿತ್ತು. ಚೀನಾದ ರಿಝಾವೊ ಬಂದರಿನತ್ತ ಹೊರಟಿದ್ದ ಈ ಹಡಗು ಯೂಟರ್ನ್ ಹೊಡೆದಿದ್ದು ಮಾರ್ಚ್ 21 ರಂದು ನವಮಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ.

ತೈಲ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ವಾರ ಭಾರತ ರಷ್ಯಾದಿಂದ 30 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಿದೆ.ವೋರ್ಟೆಕ್ಸಾ ಲಿಮಿಟೆಡ್ ಪ್ರಕಾರ ರಷ್ಯಾದ ತೈಲವನ್ನು ಹೊತ್ತುಕೊಂಡು ಚೀನಾಗೆ ಸಾಗಿಸುತ್ತಿದ್ದ ಕನಿಷ್ಠ ಏಳು ಟ್ಯಾಂಕರ್‌ಗಳು ಪ್ರಯಾಣ ಮಧ್ಯೆ ಗಮ್ಯಸ್ಥಾನವನ್ನು ಬದಲಾಯಿಸಿ ಭಾರತದತ್ತ ಆಗಮಿಸುತ್ತಿವೆ.

ತೀವ್ರಗೊಂಡ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸಿಲಿಂಡ‌ರ್ ಪೂರೈಕೆಯಲ್ಲಿ ಶೇ.100ರಷ್ಟು ಆದ್ಯತೆ ನೀಡಲು ಸೂಚನೆ ನೀಡಿದೆ. ಆದರೆ, ಹೋಟೆಲ್ಗಳಿಗೆ ಕೇವಲ 10% ಗ್ಯಾಸ್‌ ವಿತರಣೆಗೆ ಸೂಚಿಸಲಾಗಿದೆ.

ಗುರುವಾರದಿಂದ ಹೊಟೇಲ್‌ಗಳಿಗೆ ಗ್ಯಾಸ್ ವಿತರಣೆಗೆ ಸರಕಾರ ಸೂಚಿಸಿದೆ. ಆದರೆ ಅಗತ್ಯ ವಲಯಗಳಿಗೆ ಪ್ರಮುಖ ಆದ್ಯತೆ ನೀಡಲಾಗಿದೆ. ಸೀಡ್ ಪ್ರೋಸೆಸಿಂಗ್, ಆಯಿಲ್ ಉತ್ಪಾದನೆ, ಏರ್ ಲೈನ್ಸ್ ರೈಲ್ವೆ ಗೆ ಶೇ.70ರಷ್ಟು ಸಿಲಿಂಡ‌ರ್ ಮೀಸಲಿಡಲು ಸರಕಾರ ಅನಿಲ ಪೂರೈಕೆ ಡೀಲರ್‌ಗಳಿಗೆ ಸೂಚಿಸಿದೆ

Related Articles

Back to top button
error: Content is protected !!