ಜನಮನ

ಯುದ್ಧ ಕೊನೆಗೊಳಿಸಲು ಇರಾನ್ ಹಾಕಿದ ಮೂರು ಷರತ್ತುಗಳೇನು?

Views: 100

ಕನ್ನಡ ಕರಾವಳಿ ಸುದ್ದಿ: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಂಘರ್ಷ 13ನೇ ದಿನಕ್ಕೆ ತೀವ್ರಗೊಂಡಿದ್ದು, ಜಾಗತಿಕ ಕಚ್ಚಾತೈಲದ ಬೆಲೆ ಏರಿಕೆಯಾಗುತ್ತಿದೆ. ಈ ಸಂದರ್ಭ, ಇರಾನ್ ಯುದ್ಧ ಕೊನೆಗೊಳಿಸುವ ಮಾತುಗಳನ್ನಾಡಿದೆ.

ಅಮೆರಿಕದ ನೆಲೆಗಳು ಮತ್ತು ಮಧ್ಯಪ್ರಾಚ್ಯ ದೇಶಗಳ ಮೇಲೆ ನಡೆಯುತ್ತಿರುವ ದಾಳಿ ಕೊನೆಯಾಗಬೇಕಾದರೆ ನಮ್ಮ ಮೂರು ಷರತ್ತನ್ನುಗಳನ್ನು ಒಪ್ಪಿಕೊಳ್ಳಬೇಕು. ಶಾಂತಿ ಸ್ಥಾಪನೆಗಾಗಿ ಮೂರು ಪ್ರಮುಖ ಷರತ್ತುಗಳನ್ನು ಜಾರಿಗೆ ತರಬೇಕೆಂದು ಇರಾನ್‌ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಹೇಳಿದ್ದಾರೆ.

ಪೆಜೆಶ್ಕಿಯಾನ್ ಸಂಘರ್ಷವನ್ನು ನಿಲ್ಲಿಸಲು, ಇರಾನ್ ದೇಶದ ಕಾನೂನುಬದ್ಧ ಹಕ್ಕುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಬೇಕು ಮತ್ತು ಇತ್ತೀಚಿನ ಸಂಘರ್ಷದಿಂದ ಉಂಟಾದ ನಷ್ಟಗಳಿಗೆ ಪರಿಹಾರ ನೀಡಬೇಕು ಹಾಗೂ ಭವಿಷ್ಯದಲ್ಲಿ ಇರಾನ್ ಮೇಲೆ ಯಾವುದೇ ದಾಳಿ ನಡೆಯಬಾರದು ಎಂಬ ಸ್ಪಷ್ಟ ಅಂತಾರಾಷ್ಟ್ರೀಯ ಭರವಸೆ ನೀಡಬೇಕು. ಈ ಷರತ್ತುಗಳು ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ರಷ್ಯಾ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ಚರ್ಚೆ ನಡೆಸಿ, ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ತಮ್ಮ ದೇಶ ಬದ್ಧವಾಗಿದೆ ಎಂದು ಪೆಜೆಶ್ಕಿಯಾನ್ ಪುನರುಚ್ಚರಿಸಿದ್ದಾರೆ.

Related Articles

Back to top button
error: Content is protected !!