ಇತರೆ

ಶಿಬಾಜಿ ಶ್ರೀಧರ್ ಕೊಲೆ : ಸಮಗ್ರ ತನಿಖೆಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಆಗಮಿಸಿದ SIT ತಂಡ  

Views: 31

ಕನ್ನಡ ಕರಾವಳಿ ಸುದ್ದಿ: ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ನಡೆದ ಶ್ರೀಧರ ಕೊಲೆ ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು ಧರ್ಮಸ್ಥಳ ಪೊಲೀಸ್‌ ಠಾಣೆಗೆ ಸೋಮವಾರ ಆಗಮಿಸಿದ್ದು ಸಭೆ ನಡೆಸಿ ತನಿಖೆ ಆರಂಭಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಶಿಬಾಜೆ ಸಾರ ಫಾರ್ಮ್ ಗುತ್ತು ಮನೆ ಎಂಬಲ್ಲಿ ತೋಟದಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ಶ್ರೀಧರ (30) ಎಂಬಾತನನ್ನು 2022ರ ಡಿಸೆಂಬರ್ 17ರಂದು ಹಲ್ಲೆ ನಡೆಸಿ ಬಳಿಕ 18ರಂದು ಕೊಲೆ ಮಾಡಿ ತೋಟದಲ್ಲಿ ಬೆತ್ತಲೆಗೊಳಿಸಿ ಹಾಕಿದ್ದರು ಎಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನಾಲ್ಕು ಜನ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ್ದರು. ಈ ಪ್ರಕರಣ ಸಂಬಂಧ ತನಿಖೆ ಸರಿಯಾಗಿ ನಡೆಸಿಲ್ಲ ಎಂದು ಸಿಐಡಿ ತನಿಖೆ ನಡೆಸಿ ಬಿ ರಿಪೋರ್ಟ್ ಸಲ್ಲಿಸಿತ್ತು. ಮತ್ತೆ ತನಿಖೆ ಸರಿಯಾಗಿಲ್ಲ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದ ದಲಿತ ಬೆಳ್ತಂಗಡಿ ತಾಲೂಕಿನ ಶಿಬಾಜೆ ಸಾರ ಫಾರ್ಮ್ ಗುತ್ತು ಮನೆ ಎಂಬಲ್ಲಿ ತೋಟದಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ಶ್ರೀಧರ (30) ಎಂಬಾತನನ್ನು 2022ರ ಡಿಸೆಂಬರ್ 17ರಂದು ಹಲ್ಲೆ ನಡೆಸಿ ಬಳಿಕ 18ರಂದು ಕೊಲೆ ಮಾಡಿ ತೋಟದಲ್ಲಿ ಬೆತ್ತಲೆಗೊಳಿಸಿ ಹಾಕಿದ್ದರು ಎಂದು ಧರ್ಮಸ್ಥಳ ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು.

ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನಾಲ್ಕು ಜನ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ್ದರು. ಈ ಪ್ರಕರಣ ಸಂಬಂಧ ತನಿಖೆ ಸರಿಯಾಗಿ ನಡೆಸಿಲ್ಲ ಎಂದು ಸಿಐಡಿ ತನಿಖೆ ನಡೆಸಿ ಬಿ ರಿಪೋರ್ಟ್ ಸಲ್ಲಿಸಿತ್ತು. ಮತ್ತೆ ತನಿಖೆ ಸರಿಯಾಗಿಲ್ಲ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದ ದಲಿತ ಸಂಘಟನೆ ಹೋರಾಟಗಾರರು ವಿಶೇಷ ತನಿಖಾ ದಳದಿಂದ ರಚಿಸಿ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

ಫೆಬ್ರವರಿ 20 ರಂದು ಕರ್ನಾಟಕ ಸರಕಾರವು ಹೈಕೋರ್ಟ್ ಸೂಚನೆಯಂತೆ ಎಸ್‌ಐಟಿ ರಚಿಸಿ ಆದೇಶ ಮಾಡಿದ್ದು, ಕೊಲೆ ಪ್ರಕರಣದ ಎಸ್‌ಐಟಿ ತನಿಖಾಧಿಕಾರಿಯಾಗಿರುವ ಡಿವೈಎಸ್ಪಿ ಹರೀಶ್. ಎಂ.ಆ‌ರ್., ಇನ್ಸ್‌ಪೆಕ್ಟರ್ ಡಾ. ನವೀನ್ ಕುಮಾರ್, ಸಬ್ ಇನ್ಸ್‌ಪೆಕ್ಟರ್ ಪುನೀತ್ ನೇತೃತ್ವದ ಸುಮಾರು 10 ಮಂದಿಯ ತಂಡ ಧರ್ಮಸ್ಥಳ ಪೊಲೀಸ್‌ ಠಾಣೆಗೆ ಆಗಮಿಸಿ ಬೆಂಗಳೂರು ಸಿಐಡಿ ಕಚೇರಿಯಲ್ಲಿದ್ದ ಶ್ರೀಧರ ಕೊಲೆ ಪ್ರಕರಣದ ದಾಖಲೆಗಳನ್ನು ಸಂಗ್ರಹಿಸಿ ಮೊದಲ ಹಂತದ ಸಭೆ ನಡೆಸಿ ಪ್ರಕರಣದ ತನಿಖೆ ಆರಂಭಿಸಿದೆ.

Related Articles

Back to top button
error: Content is protected !!