ಶಿಕ್ಷಣ
ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಿಂಡರ್ ಗಾರ್ಟನ್ ಮಕ್ಕಳ ಅಜ್ಜ-ಅಜ್ಜಿ ದಿನಾಚರಣೆ
Views: 47
ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಿಂಡರ್ ಗಾರ್ಟನ್ ಮಕ್ಕಳ ಅಜ್ಜ ಅಜ್ಜಿಯರ ದಿನವನ್ನು ಫೆ.28ರಂದು ಆಚರಿಸಲಾಯಿತು.
ಅಜ್ಜ ಅಜ್ಜಿಯರನ್ನು ತಮ್ಮ ಮೊಮ್ಮಕ್ಕಳೊಂದಿಗೆ ಸಭೆಗೆ ಸ್ವಾಗತಿಸಲಾಯಿತು.ಮಕ್ಕಳ ಪ್ರಾರ್ಥನೆೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಅಜ್ಜ- ಅಜ್ಜಿಯರಿಗೆ ಹಲವು ಬಗೆಯ ಆಟದ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಮಕ್ಕಳು ಅವರ ಅಜ್ಜ- ಅಜ್ಜಿಯರ ಬಗ್ಗೆ ಪ್ರೀತಿಯಿಂದ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಅಜ್ಜ- ಅಜ್ಜಿಯರಿಗೆ ಸಂಬಂಧಿಸಿದ ಹಾಡಿಗೆ ಮಕ್ಕಳು ನರ್ತಿಸುವುದರೊಂದಿಗೆ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು.
ತದನಂತರ ಈ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ವಿವಿಧ ಆಟಗಳಲ್ಲಿ ವಿಜೇತರಾದವರನ್ನು ಬಹುಮಾನ ನೀಡಿ ಗೌರವಿಸಲಾಯಿತು. ಹಾಗೂ ಶಾಲಾ ರಸಪ್ರಶ್ನೆಯಲ್ಲಿ ವಿಜೇತರಾದ ಮಕ್ಕಳಿಗೆ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು.
ಶಾಲಾ ಸಂಚಾಲಕರಾದ ಶ್ರೀಯುತ ಸಂತೋಷ್ ಶೆಟ್ಟಿ ಅವರು ಮುಂದಿನ ಶೈಕ್ಷಣಿಕ ವರ್ಷದ ಯೋಜನೆ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿಯಾದ ಶ್ರೀಮತಿ ಆಶಾ ಶೆಟ್ಟಿ ಅವರು ಹಾಗೂ ಉಪ ಪ್ರಾಂಶುಪಾಲರಾದ ಶ್ರೀಮತಿ ವನಿತಾ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿರಾದ ಕುಮಾರಿ ಗಗನ ಹಾಗೂ ಶ್ರೀಮತಿ ಪ್ರೀಯಾ ಇವರು ನಿರೂಪಿಸಿದರು.









