ಇತರೆ
ಕುಂದಾಪುರ:ರಾಮಪತ್ರೆ ಕೊಯ್ಯುತ್ತಿದ್ದ ವೇಳೆ ಆಯತಪ್ಪಿ ಮರದಿಂದ ಬಿದ್ದು ಸಾವು
Views: 125
ಕನ್ನಡ ಕರಾವಳಿ ಸುದ್ದಿ: ರಾಮಪತ್ರೆ ಕೊಯ್ಯುತ್ತಿದ್ದ ಹೆಂಗವಳ್ಳಿ ಗ್ರಾಮದ ಕೀಳುಮನೆಯ ಸುದೀಪ್ ಹೆಗ್ಡೆ (45) ಅವರು ಆಯತಪ್ಪಿ ಮರದಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಸುದೀಪ್ ಹೆಗ್ಡೆ ಅವರು ಶೇಖರ ಪೂಜಾರಿ ಜತೆಯಲ್ಲಿ ರಾಮಪತ್ರೆ ಕೊಯ್ಯಲು ತೆರಳಿದ್ದರು. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದರು.
ಮೃತರು ಪತ್ನಿ ಹಾಗೂ ಒಂದೂವರೆ ವರ್ಷದ ಗಂಡು ಮಗುವನ್ನು ಅಗಲಿದ್ದಾರೆ. ಸುದೀಪ್ ಅವರ ಪತ್ನಿಯ ಸಹೋದರ ಅಮಾಸೆಬೈಲು ಗ್ರಾಮದ ಬಳ್ಳನೆ ಗಳಿಗೆಬೈಲು ಶಿವರಾಜ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






