ಧಾರ್ಮಿಕ
ಜ.25 ರಂದು ಆನೆಗುಡ್ಡೆ ಶ್ರೀ ವಿನಾಯಕ ದೇವರ ಸನ್ನಿಧಿಯಲ್ಲಿ ವಕ್ವಾಡಿ ಗ್ರಾಮಸ್ಥರಿಂದ “1008 ತೆಂಗಿನಕಾಯಿ ಸಾಮೂಹಿಕ ಮೂಡು ಗಣಪತಿ ಸೇವೆ”
Views: 81
ಭಕ್ತಾಭಿಮಾನಿಗಳೇ,
ವಕ್ವಾಡಿಯ ಸಮಸ್ತ ಗ್ರಾಮಸ್ಥರಿಂದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಊರಿನ ಜನರ ಸುಕ್ಷೇಮಕ್ಕಾಗಿ “ಸಾಮೂಹಿಕ 1008 ತೆಂಗಿನಕಾಯಿ ಮೂಡುಗಣಪತಿ ಮತ್ತು ಮುಡಿ ಅಕ್ಕಿ ಕಡಬಿನ ಸೇವೆ” ಜನವರಿ 25ರಂದು ಅಪರಾಹ್ನ 4 ಗಂಟೆಗೆ ನಡೆಯಲಿದೆ.
ಊರಿನ ಸಮಸ್ತ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸೇವೆಯಲ್ಲಿ ಪಾಲ್ಗೊಂಡು ಶ್ರೀ ವಿನಾಯಕ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತಿದ್ದೇವೆ.








