ಸಾಂಸ್ಕೃತಿಕ

ಆಸ್ಕರ್ ಸ್ಪರ್ಧೆಗೆ ಆಯ್ಕೆಯಾದ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರಾ ಚಾಪ್ಟರ್-1

Views: 106

ಕನ್ನಡ ಕರಾವಳಿ ಸುದ್ದಿ: ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ಕಾಂತಾರಾ ಚಾಪ್ಟರ್-1 ಆಸ್ಕರ್ ಪ್ರಶಸ್ತಿ ರೇಸ್ ನ್ನು ಪ್ರವೇಶಿಸಿರುವುದು ಕನ್ನಡಿಗರಿಗೆ ಖುಷಿಯ ವಿಚಾರ.

ಬಾಕ್ಸ್ ಆಫೀಸ್ ನಲ್ಲಿ 850 ಕೋಟಿ ರೂಪಾಯಿಗೂ ಹೆಚ್ಚಿನ ಗಳಿಕೆ ಕಂಡಿರುವ ಕಾಂತಾರಾ ಚಾಪ್ಟರ್-1ಸಿನಿಮಾ ಒಟಿಟಿಯಲ್ಲಿಯೂ ಪ್ರಸಾರ ಕಂಡಿದೆ. ಈ ನಡುವೆ ಆಸ್ಕರ್ ರೇಸ್ ನಲ್ಲಿ ಸ್ಥಾನ ಪಡೆದಿದೆ.

ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈ ಚಿತ್ರ ನಿರ್ಮಾಣ ಮಾಡಿದ್ದು, ರಿಷಬ್ ಶೆಟ್ಟಿ ನಿರ್ದೇಶಿಸಿ ನಾಯಕನಟನಾಗಿ ಅಬಿನಯಿಸಿದ್ದಾರೆ. ರುಕ್ಮಿಣಿ ವಸಂತ್ ನಾಯಕಿಯಾಗಿದ್ದಾರೆ. ಪ್ರತ್ಯೇಕ ಅರ್ಜಿ ಮೂಲಕ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಕಾಂತಾರಾ ಆಸ್ಕರ್ ರೇಸ್ ನಲ್ಲಿದೆ. ಇನ್ನು ಮಹಾವತಾರ ನರಸಿಂಹ ಚಿತ್ರವೂ ಆಸ್ಕರ್ ರೇಸ್ ನಲ್ಲಿದೆ. ಇದು ಭಾರತೀಯ ಚಿತ್ರರಂಗಕ್ಕೆ ಐತಿಹಾಸಿಕ ಕ್ಷಣವಾಗಿದೆ.

ಜನವರಿ 22ರಂದು ಆಸ್ಕರ್ ರೇಸ್ ನಲ್ಲಿರುವ ಚಿತ್ರಗಳ ಅಂತಿಮ ಪಟ್ಟಿ ಪ್ರಕಟವಾಗಲಿದೆ. ಮಾರ್ಚ್ 15ರಂದು ಚಿತ್ರಗಳಿಗೆ ಆಸ್ಕರ್ ಪ್ರಶಸ್ತಿ ನೀಡಲಾಗುತ್ತಿದೆ.

Related Articles

Back to top button
error: Content is protected !!