ಇತರೆ

ಕುಂದಾಪುರ: ಗಂಗೊಳ್ಳಿಯ ಗುಜ್ಜಾಡಿ ಬಳಿ ನಾಪತ್ತೆಯಾಗಿದ್ದ ಬಾಲಕ ಕಲ್ಲಿನ ಪೊಟರೆಯಲ್ಲಿ ಪತ್ತೆ 

Views: 198

ಕನ್ನಡ ಕರಾವಳಿ ಸುದ್ದಿ: ಶಾಲೆ ಮುಗಿಸಿ ಬಂದು ಸ್ನೇಹಿತರೊಂದಿಗೆ ಮನೆ ಸಮೀಪ ಆಟವಾಡುತ್ತಿದ್ದ ಬಾಲಕನೋರ್ವ ಸಂಜೆ ಬಳಿಕ ನಾಪತ್ತೆಯಾಗಿದ್ದು ಕೆಲ ಕಾಲ ಆತಂಕ ಸೃಷ್ಟಿಯಾದ ಘಟನೆ ಗಂಗೊಳ್ಳಿಯ ಗುಜ್ಜಾಡಿ ಬೆಣ್ಗೇರೆ ಎಂಬಲ್ಲಿ ಬುಧವಾರ ನಡೆದಿದೆ.

ಬಳಿಕ ಗಂಗೊಳ್ಳಿ ಪೊಲೀಸರು ಹಾಗೂ ಸ್ಥಳೀಯರ ಸತತ 5 ಗಂಟೆಯ ಹುಡುಕಾಟದ ಬಳಿಕ ರಾತ್ರಿ 12:40ರ ಸುಮಾರಿಗೆ ಮನೆ ಸಮೀಪದ ಎತ್ತರ ಪ್ರದೇಶದ ಕಲ್ಲಿನ ಪೊಟರೆಯೊಳಗೆ ಬಾಲಕನನ್ನು ಪೊಲೀಸರು ಪತ್ತೆ ಹಚ್ಚಿ ಮನೆಯವರಿಗೆ ಒಪ್ಪಿಸಿದ್ದಾರೆ.

ಘಟನೆ ವಿವರ: ಸ್ಥಳೀಯ ಸರಕಾರಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ 10 ವರ್ಷದ ಬಾಲಕ ಬುಧವಾರ ಸಂಜೆ ಮನೆ ಸಮೀಪ ಬೇರೆ ಮಕ್ಕಳೊಂದಿಗೆ ಆಟವಾಡಿಕೊಂಡಿದ್ದ. ಆದರೆ ಸಂಜೆ 7 ಘಂಟೆಯಾದರೂ ಬಾಲಕ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದನು. ಗಾಬರಿಗೊಂಡ ಮನೆಮಂದಿ ಹಾಗೂ ಸ್ಥಳೀಯರು ಬಾಲಕನಿಗಾಗಿ ಎಲ್ಲ ಹುಡುಕಾಡಿದ್ದಾರೆ. ಆದರೆ ಪತ್ತೆಯಾಗಲಿಲ್ಲ. ಬಳಿಕ ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ವಿವಿಧೆಡೆ ಹುಡುಕಾಟ ನಡೆಸಿದ್ದಾರೆ. ತಡರಾತ್ರಿ 12:40ರ ಸುಮಾರಿಗೆ ಮನೆ ಪಕ್ಕದ ಎತ್ತರದ ಕಲ್ಲು ಪೊಟರೆಯೊಳಕ್ಕೆ ಬಾಲಕನನ್ನು ಗಂಗೊಳ್ಳಿ ಠಾಣಾಧಿಕಾರಿ ಪವನ್ ನಾಯಕ್‌ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

Related Articles

Back to top button
error: Content is protected !!